ಇಂಡಿಯನ್ ಪ್ರೀಮಿಯರ್ ಲೀಗ್: ಬಗೆಹರಿಯದ ಲಂಕಾ ಕ್ರಿಕೆಟಿಗರ ಸಮಸ್ಯೆ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ಇನ್ನು ಹತ್ತು ದಿನ ಮಾತ್ರ ಬಾಕಿ ಉಳಿದಿದೆ. ಆದರೆ, ತಮಿಳುನಾಡಿನಲ್ಲಿ ಲಂಕಾ ವಿರುದ್ಧ ಉಂಟಾಗಿರುವ ಅಲೆ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಲಂಕಾ ಆಟಗಾರರು ಭಾಗವಹಿಸುವ ಬಗ್ಗೆ ಇದುವರೆಗೂ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಮುಂದಾಗಿದ್ದು, ತಮಿಳುನಾಡು ಸರ್ಕಾರದೊಂದಿಗೆ ಅದು ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಶ್ರೀಲಂಕಾ ನಡೆಸಿರುವ ಹಿಂಸಾ ಯುದ್ಧದ ಬಗ್ಗೆ ವಿಶ್ವ ಸಂಸ್ಥೆಯ ನಿಲವಳಿಯನ್ನು ವಿರೋಧಿಸಿ, ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಲಂಕಾದ ಒಟ್ಟು 13 ಆಟಗಾರರು ಈ ಪಂದ್ಯಾವಳಿಯ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.
ಲಂಕಾ ಆಟಗಾರರನ್ನು ಕೈಬಿಟ್ಟಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ವಿಚಾರವನ್ನು ಕೆಲವರು ಎತ್ತಿದ್ದರೂ, ಫ್ರಾಂಚೈಸಿಗಳು ಲಂಕಾ ಆಟಗಾರರನ್ನು ಕೈಬಿಡುವುದಕ್ಕೆ ಸಮ್ಮತಿಸಿಲ್ಲ.
ನಿರಾಕರಣೆ: ಹೀಗಾಗಿ ಶ್ರೀಲಂಕಾ ಆಟಗಾರರು ಇರುವ ಪಂದ್ಯಗಳನ್ನು ಚೆನ್ನೈನಲ್ಲಿ ನಡೆಸದಿರಲು ಕೆಲ ಐಪಿಎಲ್ ಫ್ರಾಂಚೈಸಿಗಳು ಮನವಿ ಮಾಡಿಕೊಂಡಿವೆ ಎಂದು ಸಹ ವರದಿಯಾಗಿದೆ. ಆದರೆ, ಐಪಿಎಲ್ನ ಉನ್ನತ ಮೂಲಗಳು ಇದನ್ನು ಸ್ಪಷ್ಟವಾಗಿ ನಿರಾಕರಿಸಿವೆ.
ಬೆಂಗಳೂರು ಪಂದ್ಯಗಳು ಸ್ಥಳಾಂತರ?: ಏತನ್ಮಧ್ಯೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೆಲ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.