ಸಂದೀಪ್ ಮಡಿಲಿಗೆ ಬಿಸಿಐಸಿ ಗಾಲ್ಫ್ ಪ್ರಶಸ್ತಿ
ಬೆಂಗಳೂರು: ನಗರದಲ್ಲಿ ಶನಿವಾರ ನಡೆದ ಬಿಸಿಐಸಿ ಕಾರ್ಪೊರೇಟ್ ಗಾಲ್ಫ್ ಪಂದ್ಯಾವಳಿ (3ನೇ ಆವೃತ್ತಿ) ಪ್ರಶಸ್ತಿಯನ್ನು ಸಂದೀಪ್ ಕುಲ್ಹಲ್ಲಿ ಅವರು ಗೆದ್ದುಕೊಂಡಿದ್ದಾರೆ. ನಗರದ 'ಕರ್ನಾಟಕ ಗಾಲ್ಫ್ ಸಂಸ್ಥೆ ಮೈದಾನ'ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಂದೀಪ್ ಅವರು 34 ಅಂಕಗಳನ್ನು ಗಳಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರವಿ ಶರ್ಮಾ ಅವರು ಮೊದಲ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರೆ, ಅರವಿಂದ್ ರಾಥೋಡ್ ಅವರು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 18ರಿಂದ 24ರ ವಿಭಾಗದ ಪ್ರಶಸ್ತಿಯನ್ನು ಟಿ.ಜಿ. ವಿಶ್ವನಾಥ್ (37 ಅಂಕ) ಅವರು ಗೆದ್ದುಕೊಂಡರು. ಈ ವಿಭಾಗದಲ್ಲಿ, ಎಂ.ಎಸ್. ಶೆಟ್ಟಿ (35) ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದರೆ, ಜಾರ್ಜ್ ಪಿಯರ್ಸನ್ ಅವರು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಬಿಸಿಐಸಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರ ವಿಭಾಗದ ಸ್ಪರ್ಧೆಯಲ್ಲಿ ಸಿಎಸ್ ಮುರಳಿ ಅವರು ಪ್ರಶಸ್ತಿ ಗೆದ್ದುಕೊಂಡರು. ಈ ವಿಭಾಗದಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿ ವಿ. ಉಮೇಶ್ ಅವರ ಪಾಲಾದರೆ, 2ನೇ ರನ್ನರ್ ಅಪ್ ಪ್ರಶಸ್ತಿ ಅಮರ್ ಕುಮಾರ್ ಪಾಂಡೆ ಅವರಿಗೆ ಲಭಿಸಿತು. ಪಂದ್ಯಾವಳಿ ಸಂದರ್ಭದಲ್ಲಿ, ಮಾಜಿ ಕ್ರಿಕೆಟರ್ಗಳಾದ ಇವಿಎಸ್ ಪ್ರಸನ್ನ, ಜಿ.ಆರ್. ವಿಶ್ವನಾಥ್ ಆಗಮಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.