ತಾಯ್ನಾಡಿನತ್ತ ವಿಕ್ಟೋರಿಯಾ...
ವಿಕ್ಟೋರಿಯಾ ಬೆಕಂಗೆ ಈಗ ತಮ್ಮ ತಾಯ್ನಾಡಿನ ಕಡೆಗೆ ಮೋಹ ಹೆಚ್ಚಾಗುತ್ತಿದೆಯಂತೆ. ಅಮೆರಿಕಾದಲ್ಲಿ ಬಂದು ನೆಲೆಯೂರಿ ಜನಪ್ರಿಯತೆ, ಹಣ ಎಲ್ಲವನ್ನೂ ಗಳಿಸಿದ ಮೇಲೆ, ಅವರಿಗೆ ಈಗ ಅಮೆರಿಕಾ ಸಾಕೆನಿಸಿದೆಯಂತೆ. ಹಾಗಾಗಿ, ಮುಂದಿನ ನಿಲ್ದಾಣ ಲಾಸ್ ಏಂಜಲೀಸ್ ಎಂಬ ನಿರ್ಧಾರಕ್ಕೆ ಈ ಫುಟ್ಬಾಲ್ ತಾರೆಯ ಪತ್ನಿ ಬಂದಿದ್ದಾರಂತೆ. ಅಂದಹಾಗೆ, ವಿಕ್ಟೋರಿಯಾ ತಮ್ಮ ಬಾಲ್ಯದ ಬಹುತೇಕ ವರ್ಷ ಕಳೆದಿದ್ದು ಇದೇ ಲಾಸ್ ಏಂಜಲೀಸ್ನಲ್ಲಿ. ಅಲ್ಲಿ ಅವರಿಗೆ ಸಾಕಷ್ಟು ಮಂದಿ ಸ್ನೇಹಿತೆಯರಿದ್ದಾರೆಂದು ಕೆಲ ಮೂಲಗಳು ಹೇಳುತ್ತಿವೆ. ಅವರೆಲ್ಲರೂ ಈಗ ಅಲ್ಲೇ ಸೆಟ್ಲ್ ಆಗಿದ್ದಾರೆ. ಹಾಗಾಗಿ, ಅವರೊಂದಿಗೆ ತಮ್ಮ ಮುಂದಿನ ದಿನಗಳನ್ನು ಕಳೆಯುವ ಆಸೆ ವಿಕ್ಟೋರಿಯಾಗೆ ಬಂದಿದ್ದು, ಮರಳಿ ತಮ್ಮ ಗೂಡಿಗೆ ಹೊರಡಲು ಅಣಿಯಾಗಿದ್ದಾರೆನ್ನಲಾಗಿದೆ.