ಲಿನೇಕರ್ಗೂ ಟ್ವಿಟರ್ ಕಾಟ
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ತಂಡ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಟ್ವಿಟರ್ನಲ್ಲಿ ಸಾಕಷ್ಟು ಟೀಕಾ ಪ್ರಹಾರಗಳನ್ನು ನೋಡಿದ ಆಸೀಸ್ ಕ್ರಿಕೆಟ್ ತಂಡದ ಕೋಚ್ ಮಿಕಿ ಆರ್ಥರ್, ಇತ್ತೀಚೆಗೆ ತಮ್ಮ ಟ್ವೀಟರ್ ಅಕೌಂಟ್ ಡಿಲೀಟ್ ಮಾಡಿದ್ದರು. ಈಗ ಅಂಥದ್ದೇ ಮತ್ತೊಂದು ಸುದ್ದಿ ಬಂದಿದೆ. ಇಂಗ್ಲೆಂಡ್ನ ಮಾಜಿ ಫುಟ್ಬಾಲ್ ಆಟಗಾರ ಗ್ಯಾರಿ ಲಿನೇಕರ್ ತಮ್ಮ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಕಾರಣ, ಅವರ ವೈವಾಹಿಕ ಜೀವನ ಇತ್ತೀಚೆಗೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು ಅವರಿಗೆ ಬೇಸರ ತರಿಸಿದೆಯಂತೆ. ಹಕೀಕತ್ ಏನಿದೆಯೋ ಗೊತ್ತಿಲ್ಲ. ಆದರೆ, ಸಾರ್ವಜನಿಕರ ಟ್ವಿಟ್ಗಳಿಂದ ಬೇಸತ್ತಿರುವ ಅವರಂತೂ ಸೋಷಿಯಲ್ ನೆಟ್ವರ್ಕ್ ಹವ್ಯಾಸಕ್ಕೆ ವಿದಾಯ ಹೇಳಿದ್ದಾರೆ.