ಹರಿಣಗಳ ಪಡೆಗೆ 'ಬೆಳ್ಳಿ ಗದೆ' ಗೌರವ
ದುಬೈ: ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ವನ್ ಸ್ಥಾನ ಪಡೆಯುವ ತಂಡಕ್ಕೆ ನೀಡಲಾಗುವ ರಿಲಯನ್ಸ್ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಪಟ್ಟವನ್ನು ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ, ಗುರುವಾರ 'ದಿ ವಾಂಡರರ್ಸ್' ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ಸ್ಮಿತ್ ಅವರು ಈ ಗೌರವ ಪಡೆಯಲಿದ್ದಾರೆ. ಸಾಂಪ್ರದಾಯಿಕವಾಗಿ ನೀಡಲಾಗುವ ಬೆಳ್ಳಿ ಗದೆ ಹಾಗೂ ರು. 4, 50, 000 ಡಾಲರ್ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಈ ಸಮಾರಂಭದಲ್ಲಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಐಸಿಸಿ ನಿರ್ದೇಶಕ ಕ್ರಿಸ್ ನೆನ್ಝಾನಿ, ಐಸಿಸಿ ಅಂಪೈರ್ಗಳು ಹಾಗೂ ರೆಫ್ರಿಗಳು ಭಾಗವಹಿಸಲಿದ್ದಾರೆ.