ಸಂಕಷ್ಟದಲ್ಲಿ ಆಸಿಸ್ ಬ್ಯಾಟಿಂಗ್: ಚಾಪೆಲ್
ಸಿಡ್ನಿ: ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಭಾರತದಲ್ಲಿ ಹೀನಾಯ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದು, ಆಸೀಸ್ನ ಮಾಜಿ ನಾಯಕ ಇಯಾನ್ ಚಾಪೆಲ್ ಆಸ್ಟ್ರೇಲಿಯಾದ ಬ್ಯಾಟಿಂಗ್ ಮುಳುಗುತ್ತಿರುವ ಸೂರ್ಯನಂತಾಗಿದ್ದು ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ತೀರಾ ಕಳಪೆ ಪ್ರದರ್ಶನ ತೋರಿದ್ದು, ಆಸ್ಟ್ರೇಲಿಯಾ ಮತ್ತೆ ರಿಕಿ ಪಾಂಟಿಂಗ್, ಮೈಕಲ್ ಹಸ್ಸಿ ಹಾಗೂ ಮೈಕಲ್ ಕ್ಲಾರ್ಕ್ರಂತಹ ಉತ್ತಮ ಟೆಸ್ಟ್ ಬ್ಯಾಟ್ಸ್ಮನ್ಗಳನ್ನು ಕೊಡಲು ಆಸೀಸ್ಗೆ ಸಾಧ್ಯವಿಲ್ಲ.
ಆಸ್ಟ್ರೇಲಿಯಾದ ಬ್ಯಾಟಿಂಗ್ ಗುಣಮಟ್ಟದಲ್ಲಿ ಸಮಸ್ಯೆ ಕಾಣುತ್ತಿದೆ ಎಂದು ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ. ನಾವು ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಗುಣಮಟ್ಟದಲ್ಲಿನ ಗುಣಮಟ್ಟದ ಸಮಸ್ಯೆಯ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲ. ಮುಂದಿನ ಬ್ಯಾಟಿಂಗ್ ಭವಿಷ್ಯಗಳಾದ 19 ವರ್ಷದೊಳಗಿನ ತಂಡದಲ್ಲೂ ಉತ್ತಮ ಗುಣಮಟ್ಟದ ಟೆಸ್ಟ್ ಬ್ಯಾಟ್ಸ್ಮನ್ಗಳು ಕಂಡುಬರುತ್ತಿಲ್ಲ ಎಂದು ಚಾಪೆಲ್ ವಿಷಾದ ವ್ಯಕ್ತಪಡಿಸಿದರು. ಇಂತಹ ಸಮಯದಲ್ಲಿ ನಾವು ಕೇವಲ ಕೋಚ್ ಬದಲಾವಣೆ, ತಂಡದ ಮ್ಯಾನೇಜರ್ ಬದಲಾವಣೆ ಬಗ್ಗೆ ಮಾತ್ರಚರ್ಚೆ ನಡೆಸುತ್ತಿದ್ದೇವೆ ಹೊರತು ಸಮಸ್ಯೆಯ ಮೂಲದ ಬಗ್ಗೆ ಚಿಂತಿಸುವಲ್ಲಿ ವಿಫಲವಾಗಿದ್ದೇವೆ ಎಂದು ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.