ಕ್ರೀಡೆ

ದೀಪಿಕಾ, ಘೋಸಾಲ್‌ಗೆ ಸೋಲು

ಕೌಲಾಲಂಪುರ: ದೀಪಿಕಾ ಪಳ್ಳಿಕಾಲ್ ಮತ್ತು ಸೌರವ್ ಘೋಸಾಲ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಸೋಲನುಭವಿಸುವ ಮೂಲಕ ಕೌಲಾಲಂಪುರ ಓಪನ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ವಿಶ್ವದ ನಂ. 15 ಪಳ್ಳಿಕಾಲ್ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ, ವಿಶ್ವದ ನಂ.1 ಆಟಗಾರ್ತಿ ಇಂಗ್ಲೆಂಡ್‌ನ ಜೆನ್ನಿ ಡಂಕಾಲ್ಫ್ ವಿರುದ್ಧ 9-11, 5-11, 11-6, 4-11 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.
ಇನ್ನು ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ಘೋಸಾಲ್, ಈಜಿಪ್ಟ್‌ನ ಟಾರೆಕ್ ಮೋಮೆನ್ ವಿರುದ್ಧ 6-11, 11-8, 11-5, 6-11, 5-11 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.
ದೀಪಿಕಾ ಮತ್ತು ಡಂಕಾಲ್ಫ್ ಇಬ್ಬರೂ ಆಟಗಾರ್ತಿಯರು ಪಂದ್ಯದಲ್ಲಿ ನಾಲ್ಕೂ ಮೂಲೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು, ಬಲಿಷ್ಠ ಪ್ರದರ್ಶನ ನೀಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಡಂಕಾಲ್ಫ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ನಿಕೊಲ್ ಡೇವಿಡ್ ಅವರನ್ನು ಎದುರಿಸಲಿದ್ದಾರೆ.
ಇನ್ನು ವಿಶ್ವದ ನಂ. 19 ಆಟಗಾರ ಘೋಸಾಲ್ ಪಂದ್ಯದಲ್ಲಿ ಮೊದಲು 2-1 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಅಂತಿಮವಾಗಿ ಎದುರಾಮಿ ಮೊಮೆನ್ ವಿರುದ್ಧ ಕೈಚೆಲ್ಲಿದರು.
ಮೊದಲ ಸೆಟ್‌ನಲ್ಲಿ ಕೈಚೆಲ್ಲಿದ ನಂತರ ಘೋಸಾಲ್ ನಂತರ ಸತತ ಎರಡು ಸೆಟ್‌ಗಳಲ್ಲಿ ಜಯ ಕಂಡುಕೊಂಡರು. ಆದರೆ, ನಂತರ ಸತತ ಎರಡು ಸೆಟ್‌ಗಳಲ್ಲಿ ಕೈಚೆಲ್ಲಿದ್ದು, ಅವರಿಗೆ ಹಿನ್ನಡೆ ಉಂಟುಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ