ಕ್ರೀಡೆ

ಕರ್ನಾಟಕ ಕ್ರಿಕೆಟ್‌ಗೆ ಹೊಸ ಲುಕ್

ಕ.ಪ್ರ. ವಾರ್ತೆ ಶಿವಮೊಗ್ಗ  ಮಾ.29
ಯಾವಾಗ ಶ್ರೇಷ್ಠವಾದ ಕೌಶಲ್ಯವು ಅತ್ಯುತ್ತಮವಾದ ಮೂಲಭೂತ ಸೌಕರ್ಯಗಳನ್ನು ಹೊಂದುವುದೋ ಆಗ ಅಪ್ಪಟವಾದ ಸಾಧನೆ ಕಾಣಬಹುದೆಂಬುದು ರಾಜ್ಯ ಕ್ರಿಕೆಟ್ ಸಂಸ್ಥೆಯ ಸ್ಪಷ್ಟ ಸಂದೇಶ. ಇದರ ಅಡಿಯಲ್ಲೇ ರಾಜ್ಯದ ಅನೇಕ ಕಡೆ ಕ್ರಿಕೆಟ್ ಪ್ರೋತ್ಸಾಹಿಸಲು ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ, ಶಿವಮೊಗ್ಗ, ಮಂಗಳೂರು, ಮೈಸೂರು, ಹಾಸನ, ಹುಬ್ಬಳ್ಳಿ- ಧಾರವಾಡ ಮತ್ತಿತರ ಕಡೆ ಕೆಎಸ್‌ಸಿಎ ಟರ್ಫ್ ಅಂಕಣಗಳನ್ನು ಸಿದ್ಧಪಡಿಸಿದ್ದು, ರಾಯಚೂರು, ದಾವಣಗೆರೆ, ಬೆಳಗಾವಿ ಈ ಕಾರ್ಯ ಆರಂಭವಾಗಿದೆ. ಉದಯೋನ್ಮುಖ ಕ್ರಿಕೆಟ್ ಪಟುಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸುವುದು ಕ್ರಿಕೆಟ್ ಮಂಡಳಿಯ ಉದ್ದೇಶ, ಈ ನಿಟ್ಟಿನಲ್ಲಿ ವಿವಿಧ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ ಎಂದು ವಿವರಿಸಿದರು.
ಪೂರ್ಣ ಟರ್ಫ್ ಪಿಚ್: ಈಗ ನಿರ್ಮಾಣವಾಗುತ್ತಿರುವ ಅಂಕಣಗಳು ಪೂರ್ಣ ಟರ್ಫ್ ಪಿಚ್‌ಗಳ ಜೊತೆಗೆ ಸುಸಜ್ಜಿತ ಪೆವಿಲಿಯನ್, ವಸತಿ ವ್ಯವಸ್ಥೆ, ಜಿಮ್, ಪ್ರಾಕ್ಟಿಸ್ ಪಿಚ್ ಸಹ ಒಳಗೊಂಡಿರುತ್ತವೆ. ಇದರಿಂದ ಒಬ್ಬ ಕ್ರಿಕೆಟ್ ಆಟಗಾರನಿಗೆ ಅಗತ್ಯವಾದ ಎಲ್ಲಾ ಸೌಕರ್ಯ ಸಿಕ್ಕಂತಾಗುತ್ತದೆ. ಅದೇ ರೀತಿ ಎಲ್ಲಾ ಕಡೆಯೂ ಒಂದೇ ಮಾನದಂಡದಲ್ಲಿ ಸೌಲಭ್ಯ ಕಲ್ಪಿಸಿರುವ ಕಾರಣ ಆಟಗಾರನಿಗೆ ಸೌಲಭ್ಯ ಅಥವಾ ವ್ಯವಸ್ಥೆಯಲ್ಲಿ ವ್ಯತ್ಯಾಸ ಇರುವುದಿಲ್ಲ. ಬೆಂಗಳೂರಿನಲ್ಲಿ ಆಡಿದರೂ ಒಂದೇ ಅನುಭವ, ಶಿವಮೊಗ್ಗ, ರಾಯಚೂರಿನಲ್ಲಿ ಆಡಿದರೂ ಒಂದೇ ಅನುಭವವಾಗಿರುತ್ತದೆ ಎಂದು ಹೇಳಿದರು.
ಸೂಕ್ತ ಮಾರ್ಗದರ್ಶನ: ಈಗ ಸಿದ್ಧಗೊಂಡಿರುವ ಪಿಚ್ ಹಾಗೂ ನಿರ್ಮಾಣಗೊಳ್ಳುತ್ತಿರುವ ಪಿಚ್‌ಗಳು ಅಂತರಾಷ್ಟ್ರೀಯ ಗುಣಮಟ್ಟದ್ದು ಎಂದ ಅವರು, ಆರ್‌ಸಿ ಕ್ರಿಕೆಟ್ ಕ್ಲಬ್‌ಗಳ ಮೂಲಕ ಸ್ಥಳೀಯ ಆಟಗಾರರ ಪ್ರತಿಭೆ ಹೊರತೆಗೆದು ಅರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ತಿಳಿಸಿದರು.
ಟೆಸ್ಟ್ ಪಂದ್ಯ ಆಡಿಸಲು ನಮ್ಮ ಸಂಸ್ಥೆ ಇಲ್ಲ. ಬದಲಾಗಿ ಕ್ರಿಕೆಟ್ ಆಸಕ್ತ ಹುಡುಗರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಮುಖ್ಯ ಉದ್ದೇಶ, ಉತ್ತಮ ಆಟಗಾರರಿಗೆ ಉತ್ತಮ ಮೂಲಭೂತ ಸೌಕರ್ಯ ಒದಗಿಸುವುದು ಆದ್ಯ ಕರ್ತವ್ಯ ಎಂದು ಹೇಳಿದರು.
ಹೊಸ ತಂತ್ರಜ್ಞಾನ: ಕ್ರಿಕೆಟ್ ಕಲಿಯಲು ಸಿಬಿವಿಸಿ ತಂತ್ರಜ್ಞಾನ (ಪಿಚ್‌ನಲ್ಲೇ ಪ್ರಾಕ್ಟಿಸ್ ಲೈವ್) ಅಳವಡಿಸಿಕೊಳ್ಳಲು ಕೆಎಸ್‌ಸಿಎ ಮುಂದಾಗಿದೆ ಎಂದು ಶ್ರೀನಾಥ್ ಹೇಳಿದರು. ಅಂದರೆ, ಆಟಗಾರನೊಬ್ಬ ಕೋಚ್‌ನಿಂದ ತರಬೇತಿ ಪಡೆಯುವ ಅವಧಿಯಲ್ಲೇ ಆತನ ತರಬೇತಿಯ ಬಾಲ್ ಟು ಬಾಲ್ ವಿಡಿಯೋ ತುಣುಕನ್ನು ಕೋಚ್ ತೋರಿಸಿ ತಪ್ಪುಗಳನ್ನು ತಿಳಿಸುವ ಜೊತೆಗೆ ಸಲಹೆಗಳನ್ನು ಪಡೆಯಲು ಅವಕಾಶಈ ತಂತ್ರಜ್ಞಾನದಲ್ಲುಂಟು. ಸದ್ಯ ಬೆಂಗಳೂರಿನಲ್ಲಿ ಈ ಸೌಲಭ್ಯ ಕಲ್ಪಿಸಿ ಮುಂದಿನ 2-3 ತಿಂಗಳಲ್ಲಿ ಶಿವಮೊಗ್ಗದಲ್ಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಕೆಪಿಎಲ್ ನಡೆಸಲು ಪ್ರಯತ್ನ
ಐಪಿಎಲ್ ಮಾದರಿಯಲ್ಲೇ ಕೆಎಸ್‌ಸಿಎ ನಡೆಸುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಕೆಪಿಎಲ್ ಪಂದ್ಯಾವಳಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಫ್ರಾಂಚೈಸಿಗಳಿಂದ ಬೆಂಬಲ ವ್ಯಕ್ತವಾಗುತ್ತಿಲ್ಲ. ತಂಡಗಳ ಕೊರತೆ ಉಂಟಾಗಿದೆ. ಆದರೆ, ನಾವು ಪ್ರಯತ್ನ ಕೈಬಿಟ್ಟಿಲ್ಲ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದ್ದಾರೆ. ಮುಂದಿನ ಹಂತದ ಕೆಪಿಎಲ್ ಪಂದ್ಯಾವಳಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಲಾಯಿತಾದರೂ ಮೂರು ತಂಡಗಳು ಮಾತ್ರ ಭಾಗಿಯಾದವು. ನಮ್ಮ ನಿರೀಕ್ಷೆ ಮುಟ್ಟಲಿಲ್ಲ, ಇನ್ನು ಮೂರು ತಂಡಗಳು ಬರಬೇಕಾಗಿತ್ತು ಎಂದು ಹೇಳಿದರು. ಕೆಪಿಎಲ್ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಭಾವಶಾಲಿ. ಕೆಪಿಎಲ್ ಅನ್ನು ನಡೆಸಲು ಕೆಎಸ್‌ಸಿಎ ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಕೈಬಿಟ್ಟಿಲ್ಲ ಎಂದು ಹೇಳಿದ ಅವರು, ಅನೇಕ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಲಭ್ಯವಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!