ಬೆಂಗಳೂರು: ಗಾಯದ ಸಮಸ್ಯೆಯಿಂದ ಹೊರ ಬಂದು ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಜಹೀರ್ ಖಾನ್, ಶುಕ್ರವಾರವೂ ಅಭ್ಯಾಸವನ್ನು ನಡೆಸದೇ ಕೇವಲ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸಿದರು.ಎನ್‌ಸಿಎನ ಮುಖ್ಯ ದೈಹಿಕ ತಜ್ಞ ಆಶಿಶ್ ಕೌಶಿಕ್ ಸಮ್ಮುಖದಲ್ಲಿ ಹೆಚ್ಚು ಓಡಿದ ಜಹೀರ್ ಖಾನ್ ತಮ್ಮ ಫಿಟ್ನೆಸ್‌ನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.