ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎನ್‌ಆರ್‌ಎಐ ಮೇಲ್ಮನವಿ

Mainashree
Updated On : 2 May 2013, 12:21 pm

ನವದೆಹಲಿ: ತನ್ನ ಆಶಯಕ್ಕೆ ವಿರುದ್ಧವಾಗಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ), ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಿದೆ.  ಏ. 6ರಂದು ನಡೆದಿದ್ದ ಎನ್‌ಆರ್‌ಎಐ ಪದಾಧಿಕಾರಿಗಳ ಚುನಾವಣೆಯನ್ನು ಅಸಿಂಧುಗೊಳಿಸಿರುವ ಹೈಕೋರ್ಟ್, ಚುನಾವಣೆಯಲ್ಲಿ ನೀತಿ-ನಿಮಯಗಳನ್ನು ಗಾಳಿಗೆ ತೂರಿರುವ ಹಿನ್ನೆಲೆಯಲ್ಲಿ, ಚುನಾಯಿತರಾಗಿರುವ ಎಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ರದ್ದು ಮಾಡಿತ್ತು.  ಇದೀಗ, ಹೈ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಎನ್‌ಆರ್‌ಎಐ ಮೇಲ್ಮನವಿ ಸಲ್ಲಿಸಿದೆ.

ಹಿನ್ನೆಲೆ: ಏ. 6ರಂದು ನಡೆಯಬೇಕಿದ್ದ ಚುನಾವಣೆಗೆ ಸ್ಪರ್ಧಿಸಲು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರಾಜ್ಯವರ್ಧನ್ ಸಿಂಗ್ ಅವರು, ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಅವರ ಉಮೇದುವಾರಿಕೆಯನ್ನು ಎನ್‌ಆರ್‌ಎಐ ತಿರಸ್ಕರಿಸಿತ್ತು. ಅಲ್ಲದೇ, ಮಾ. 4ರಂದು ನಾಲ್ವರು ಸದಸ್ಯರನ್ನು ಸಂಸ್ಥೆಗೆ ಅಜೀವ ಸದಸ್ಯರನ್ನಾಗಿ ನೇಮಿಸಲಾಗಿತ್ತು ಹಾಗೂ ಏ. 6ರಂದು ಚುನಾವಣೆಯನ್ನು ನಡೆಸಿ, ಪದಾಧಿಕಾರಿಗಳ ಸ್ಥಾನಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿತ್ತು.  ತಮ್ಮ ಉಮೇದುವಾರಿಕೆಯನ್ನು ಪ್ರಶ್ನಿಸಿದ್ದ ಸಂಸ್ಥೆಯ ಕ್ರಮವನ್ನು ರಾಜ್ಯವರ್ಧನ ಸಿಂಗ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಲ್ಲದೇ, ಮಾ. 26ರಂದು ನಾಲ್ವರನ್ನು ಆಜೀವ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಸಂಸ್ಥೆಯ ಕ್ರಮದ ಬಗ್ಗೆಯೂ ನ್ಯಾಯಾಲಯದಲ್ಲಿ ಆಕ್ಷೇಪ ಎತ್ತಿದ್ದರು.  ಈ ಹಿನ್ನೆಲೆಯಲ್ಲಿ, ಈ ಕುರಿತಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಏ. 22ರಂದು ತೀರ್ಪು ನೀಡಿ, ನಾಲ್ವರು ಆಜೀವ ಸದಸ್ಯರ ನೇಮಕ ಹಾಗೂ ಏ. 6ರಂದು ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳ ನೇಮಕಗಳನ್ನು ರದ್ದು ಮಾಡಿ, ಆದೇಶ ಹೊರಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement