ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿಂಗ್ಸ್ ಕದನ ಕುತೂಹಲ

Mainashree
Updated On : 2 May 2013, 12:21 pm

ಚೆನ್ನೈ: ಸ್ಥಿರ ಪ್ರದರ್ಶನ ನೀಡಲು ಹೆಣಗಾಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಕರ್ಷಕ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 4 ರನ್‌ಗಳಿಂದ ಸೋಲನುಭವಿಸಿರುವ ಪಂಜಾಬ್ ಈ ಪಂದ್ಯದಲ್ಲಾದರೂ ಜಯ ಸಾಧಿಸುವ ಯತ್ನದಲ್ಲಿದೆ.
ಇನ್ನು ಚೆನ್ನೈ ಎಲ್ಲ ರೀತಿಯಿಂದ ಸಮರ್ಥ ಪ್ರದರ್ಶನ ನೀಡುವುದರೊಂದಿಗೆ ಪಂದ್ಯಾವಳಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಚೆನ್ನೈ ತಂಡ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿದೆ.
ಆರಂಭಿಕ ಆಟಗಾರ ಮೈಕಲ್ ಹಸ್ಸಿ ಫಾರ್ಮ್‌ಲ್ಲಿರುವುದರೊಂದಿಗೆ ಚೆನ್ನೈ ಕಳೆದ ಆರು ಪಂದ್ಯಗಳಲ್ಲಿ ಜಯ ಕಂಡುಕೊಂಡಿದೆ. ಆದರೆ, ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರ ಹಸ್ಸಿ ರನ್ ಗಳಿಸುವಲ್ಲಿ ವೈಫಲ್ಯ ಕಂಡಿದ್ದಾರೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಭುತ ಫಾರ್ಮ್‌ಲ್ಲಿರುವುದು ಅಂತಿಮ ಓವರ್‌ಗಳಲ್ಲಿ ತಂಡ ಹೆಚ್ಚಿನ ರನ್ ಗಳಿಸಲು ನೆರವಾಗಿದೆ. ಇನ್ನು ಆಲ್ರೌಂಡರ್ ರವಿಂದ್ರ ಜಡೇಜಾ ಆಕರ್ಷಕ ಪ್ರದರ್ಶನ ನೀಡುತ್ತಿರುವುದು, ಪಂಜಾಬ್ ತಂಡದ ಆತಂಕ ಹೆಚ್ಚಿಸಿದೆ.
ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೈನ್ ಬ್ರಾವೋ. ಚೆನ್ನೈ ಪರ 16 ವಿಕೆಟ್ ಪಡೆದಿದ್ದಾರೆ. ಆದರೆ, ಬ್ರಾವೋ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದಾರೆ.
ಫಾರ್ಮ್ ಕಳೆದುಕೊಂಡಿರುವ ಮುರಳಿ ವಿಜಯ್ ಅವರನ್ನು ಕೈಬಿಟ್ಟಿದ್ದು, ಅವರ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿರುವ ವೃದ್ಧಿಮಾನ್ ಸಾಹಾ ಆರಂಭಿಕ ಆಟಗಾರನಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಅಲ್ಬೀ ಮಾರ್ಕೆಲ್ ನಾಲ್ಕು ಪಂದ್ಯಗಳಿಂದ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಆದರೆ, ಯುವ ವೇಗದ ಬೌಲರ್ ಮೋಹಿತ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದು ಏಳು ಪಂದ್ಯಗಳಿಂದ 16.6 ಸರಾಸರಿಯೊಂದಿಗೆ 9 ವಿಕೆಟ್ ಕಬಳಿಸಿದ್ದಾರೆ.
ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಆ್ಯಡಂ ಗಿಲ್‌ಕ್ರಿಸ್ಟ್ ಕಳೆದ ಪಂದ್ಯದಲ್ಲಿ ತಾವೇ ಹೊರಗುಳಿದಿದ್ದಾರೆ. 8 ಪಂದ್ಯಗಳಿಂದ ಕೇವಲ 94 ರನ್ ಗಳಿಸಿರುವ ಗಿಲ್‌ಕ್ರಿಸ್ಟ್ ಸೂಕ್ತ ನಿರ್ಧಾರ ತೆಗೆದಕೊಂಡಿದ್ದಾರೆ.
9 ಪಂದ್ಯಗಳಿಂದ 228 ರನ್ ಗಳಿಸಿ ತಂಡಕ್ಕೆ ಆಶ್ರಯವಾಗುತ್ತಿರುವ ಮಂದೀಪ್ ಸಿಂಗ್, ಆಸ್ಟ್ರೇಲಿಯಾದ ಶಾನ್ ಮಾರ್ಷ್ ಅವರೊಂದಿಗೆ ಆರಂಭಿಕರಾಗಿ ಅಂಗಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಇನ್ನೊಬ್ಬ ಆಟಗಾರ ಡೇವಿಡ್ ಹಸ್ಸಿ ಸಹ ತಂಡಕ್ಕೆ ನೆರವಾಗುತ್ತಿದ್ದಾರೆ.
ಆದರೆ, ತವರಿನಿಂದ ಹೊರಗಿನ ಪಂದ್ಯಗಳಲ್ಲಿ ಜಯ ಕಾಣದಿರುವುದೇ ಪಂಜಾಬ್ ತಂಡದ ಪ್ರಮುಖ ಸಮಸ್ಯೆಯಾಗಿದೆ.
ತಂಡದಲ್ಲಿ ಆಗಿರುವ ಬದಲಾವಣೆಗಳು ಪಂಜಾಬ್‌ಗೆ ಬಲ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಪಂದ್ಯ ಅಭಿಮಾನಿಗಳಲ್ಲಿ ಕಾತರ ಉಂಟುಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement