ಡೆವಿಲ್ಸ್ಗೆ ಸಾಧಾರಣ ಗುರಿ ನೀಡಿದ ರೈಡರ್ಸ್
ರಾಯ್ಪುರ: ಡೇರ್ಡೇವಿಲ್ಸ್ ಬೌಲರ್ಗಳ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಪಡೆಗೆ 137 ರನ್ಗಳ ಸಾಧಾರಣ ಮೊತ್ತದ ಸವಾಲೊಡ್ಡಿತು.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಡೆಲ್ಲಿ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭರವಸೆಯ ಬ್ಯಾಟ್ಸ್ಮನ್ ಮತ್ತು ನಾಯಕ ಗೌತಮ್ ಗಂಭೀರ್ ಒಂದು ಎಸೆತವನ್ನೂ ಎದುರಿಸದೇ ರನೌಟ್ ಆಗಿದ್ದು ತಂಡಕ್ಕೆ ಆರಂಭಿಕ ಆಘಾತವನ್ನು ಉಂಟುಮಾಡಿತು.
ಗಂಭೀರ್ ವಿಕೆಟ್ ಒಪ್ಪಿಸಿದ ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಲು ಡೆಲ್ಲಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಗಂಭೀರ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿದಿದ್ದ ಮನ್ವಿಂದರ್ ಬಿಸ್ಲಾ (4), ಉಮೇಶ್ ಯಾದವ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಬೇಗನೆ ಪೆವಿಲಿಯನ್ಗೆ ನಿರ್ಗಮಿಸಿದರು.
ನಂತರ ಬಂದ ಯೂಸುಫ್ ಪಠಾಣ್ (20), ಜಾಕ್ ಕಾಲೀಸ್ (12), ಇಯಾನ್ ಮಾರ್ಗನ್ (10), ದೇಬಬ್ರತಾ ದಾಸ್ (18), ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟರು. ಆದರೆ, ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿದ್ದ ಸಮಿತ್ ನರ್ವಾಲ (23) ಉಮೇಶ್ ಯಾದವ್ ಬೌಲಿಂಗ್ನಲ್ಲಿ ಉನ್ಮುಕ್ತ್ ಚಾಂದ್ಗೆ ಕ್ಯಾಚ್ ನೀಡಿದರು. ಅಂತ್ಯದಲ್ಲಿ ಬಂದ ಬ್ರೆಟ್ ಲೀ ಕೇವಲ 6 ಎಸೆತಗಳನ್ನು ಎದುರಿಸಿ 16 ರನ್ ಪೇರಿಸಿದ್ದು ತಂಡದ ಮೊತ್ತ 130ರ ಗಡಿ ದಾಟಲು ನೆರವಾಯಿತು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಭಾಟಿಯಾ (ಅಜೇಯ 26) ಗಳಿಸಿದರು.
ಡೆಲ್ಲಿ ಪರ ಉಮೇಶ್ ಯಾದವ್ 2 ವಿಕೆಟ್ ಕಬಳಿಸಿದರೆ, ಇರ್ಫಾನ್ ಫಠಾಣ್, ಆಶಿಶ್ ನೆಹ್ರಾ, ಮಾರ್ನೆ ಮಾರ್ಕೆಲ್ ಹಾಗೂ ಶಹಭಾಜ್ ನದೀಂ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್
ಕೋಲ್ಕತಾ ನೈಟ್ರೈಡರ್ಸ್ 136/7 (20 ಓವರ್)
ಬಿಸ್ಲಾ ಬಿ ಯಾದವ್ 4(7)
ಗಂಭೀರ್ ರನೌಟ್ (ಇರ್ಫಾನ್) 0(0)
ಯೂಸಫ್ ಸಿ ಇರ್ಫಾನ್ ಬಿ ಮಾರ್ಕೆಲ್ 20(16),
ಕಾಲಿಸ್ ಸಿ ರೊಹ್ರೆರ್ ಬಿ ಇರ್ಫಾನ್ 12(15),
ಮಾರ್ಗನ್ ಸಿ ಯಾದವ್ ಬಿ ನದಿಂ 10(9)
ದಾಸ್ ಸಿ ಜಾಧವ್ ಬಿ ನೆಹ್ರಾ 18(26)
ಭಾಟಿಯಾ ಅಜೇಯ 26(26)
ನರ್ವಾಲ್ ಸಿ ಚಂದ್ ಬಿ ಯಾದವ್ 23(15)
ಬ್ರೆಟ್ ಲೀ ಅಜೇಯ 16(6)
ಇತರೆ 7
ವಿಕೆಟ್ ಪತನ: 1-4, 2-16, 3-37, 4-48, 5-50, 6-84, 7-114
ಬೌಲಿಂಗ್:
ಇರ್ಫಾನ್ 4-0-16-1,
ನೆಹ್ರಾ 4-0-37-1,
ಯಾದವ್ 4-0-36-2,
ಮಾರ್ಕೆಲ್ 4-0-22-1,
ನದಿಂ 4-1-23-1