ಡೇರ್ ಡೆವಿಲ್ಸ್ಗೆ ಬಾಗಿದ ನೈಟ್ರೈಡರ್ಸ್
ರಾಯ್ಪುರ: ಡೇರ್ಡೇವಿಲ್ಸ್ ಬೌಲರ್ಗಳ ಮಾರಕ ದಾಳಿ ಹಾಗೂ ಡೇವಿಡ್ ವಾರ್ನರ್ (66) ಅವರ ಜವಾಬ್ದಾರಿಯುತ ಅಜೇಯ ಅರ್ಧಶತಕದ ನೆರವಿನಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಡೆಲ್ಲಿ ವಿರುದ್ಧ 7 ವಿಕೆಟ್ಗಳ ಸೋಲನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 136 ರನ್ಗಳಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ಡೆವಿಲ್ಸ್ ಕೇವಲ 17.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ಗುರಿಯನ್ನು ತಲುಪಿದರು.
ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜಯವರ್ಧನೆ (5) ಹಾಗೂ ಸೆಹ್ವಾಗ್ (17) ಹೆಚ್ಚು ಹೋತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಂತರ ಬಂದ ಉನ್ಮುಕ್ತ್ ಚಂದ್ (37) ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ನಂತರ ಬಂದ ಡೇವಿಡ್ ವಾರ್ನರ್ 42 ಎಸೆತಗಳಲ್ಲಿ ಅಜೇಯ 66 ರನ್ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ನಾಯಕ ಗೌತಮ್ ಗಂಭೀರ್ ಒಂದು ಎಸೆತವನ್ನೂ ಎದುರಿಸದೇ ರನೌಟ್ ಆಗಿದ್ದು ತಂಡಕ್ಕೆ ಆರಂಭಿಕ ಆಘಾತವನ್ನು ಉಂಟುಮಾಡಿತು.
ಗಂಭೀರ್ ವಿಕೆಟ್ ಒಪ್ಪಿಸಿದ ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಲು ಡೆಲ್ಲಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಗಂಭೀರ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿದಿದ್ದ ಮನ್ವಿಂದರ್ ಬಿಸ್ಲಾ (4), ಉಮೇಶ್ ಯಾದವ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಬೇಗನೆ ಪೆವಿಲಿಯನ್ಗೆ ನಿರ್ಗಮಿಸಿದರು.
ನಂತರ ಬಂದ ಯೂಸುಫ್ ಪಠಾಣ್ (20), ಜಾಕ್ ಕಾಲೀಸ್ (12), ಇಯಾನ್ ಮಾರ್ಗನ್ (10), ದೇಬಬ್ರತಾ ದಾಸ್ (18), ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟರು.
ಆದರೆ, ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿದ್ದ ಸಮಿತ್ ನರ್ವಾಲ (23) ಉಮೇಶ್ ಯಾದವ್ ಬೌಲಿಂಗ್ನಲ್ಲಿ ಉನ್ಮುಕ್ತ್ ಚಾಂದ್ಗೆ ಕ್ಯಾಚ್ ನೀಡಿದರು.
ಅಂತ್ಯದಲ್ಲಿ ಬಂದ ಬ್ರೆಟ್ ಲೀ ಕೇವಲ 6 ಎಸೆತಗಳನ್ನು ಎದುರಿಸಿ 16 ರನ್ ಪೇರಿಸಿದ್ದು ತಂಡದ ಮೊತ್ತ 130ರ ಗಡಿ ದಾಟಲು ನೆರವಾಯಿತು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಭಾಟಿಯಾ (ಅಜೇಯ 26) ಗಳಿಸಿದರು.
ಡೆಲ್ಲಿ ಪರ ಉಮೇಶ್ ಯಾದವ್ 2 ವಿಕೆಟ್ ಕಬಳಿಸಿದರೆ, ಇರ್ಫಾನ್ ಫಠಾಣ್, ಆಶಿಶ್ ನೆಹ್ರಾ, ಮಾರ್ನೆ ಮಾರ್ಕೆಲ್ ಹಾಗೂ ಶಹಭಾಜ್ ನದೀಂ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್
ಕೋಲ್ಕತಾ ನೈಟ್ರೈಡರ್ಸ್ 136/7 (20 ಓವರ್)
ಬಿಸ್ಲಾ ಬಿ ಯಾದವ್ 4(7), ಗಂಭೀರ್ ರನೌಟ್ (ಇರ್ಫಾನ್) 0(0), ಯೂಸಫ್ ಸಿ ಇರ್ಫಾನ್ ಬಿ ಮಾರ್ಕೆಲ್ 20(16),
ಕಾಲಿಸ್ ಸಿ ರೊಹ್ರೆರ್ ಬಿ ಇರ್ಫಾನ್ 12(15), ಮಾರ್ಗನ್ ಸಿ ಯಾದವ್ ಬಿ ನದಿಂ 10(9), ದಾಸ್ ಸಿ ಜಾಧವ್ ಬಿ ನೆಹ್ರಾ 18(26), ಭಾಟಿಯಾ ಅಜೇಯ 26(26), ನರ್ವಾಲ್ ಸಿ ಚಂದ್ ಬಿ ಯಾದವ್ 23(15), ಬ್ರೆಟ್ ಲೀ ಅಜೇಯ 16(6). ಇತರೆ 7
ವಿಕೆಟ್ ಪತನ: 1-4, 2-16, 3-37, 4-48, 5-50, 6-84, 7-114
ಬೌಲಿಂಗ್: ಇರ್ಫಾನ್ 4-0-16-1, ನೆಹ್ರಾ 4-0-37-1,
ಯಾದವ್ 4-0-36-2, ಮಾರ್ಕೆಲ್ 4-0-22-1, ನದಿಂ 4-1-23-1.
ಡೆಲ್ಲಿ ಡೇರ್ಡೆವಿಲ್ಸ್: 137/3 (17.5 ಓವರ್)
ಜಯವರ್ಧನೆ ಸಿ ಕಾಲಿಸ್ ಬಿ ಬಾಲಾಜಿ 5 (8), ವೀರೇಂದ್ರ ಸೆಹ್ವಾಗ್ ಸಿ ಪಠಾಣ್ ಬಿ ಕಾಲಿಸ್ 17 (15), ಉನ್ಮುಕ್ತ್ ಚಾಂದ್ ಸಿ ಬಾಲಾಜಿ ಬಿ ಬ್ರೆಟ್ ಲೀ 37 (39), ವಾರ್ನರ್ ಅಜೇಯ 66 (42), ರೊಹ್ರರ್ ಅಜೇಯ 10 (3). ಇತರೆ 2.
ವಿಕೆಟ್ ಪತನ: 1-23, 2-27, 3-122.
ಬೌಲಿಂಗ್: ಬ್ರೆಟ್ ಲೀ 4-0-26-1, ಬಾಲಾಜಿ 4-0-35-1, ಜಾಕ್ ಕಾಲಿಸ್ 3-0-29-1, ಸುನಿಲ್ ನಾರಾಯಣ್ 4-0-14-0, ರಜತ್ ಭಾಟಿಯಾ 2-0-21-0, ಯೂಸುಫ್ ಪಠಾಣ್ 0.5-0-11-0.