ಹಾಕಿ: ತರಬೇತಿ ಶಿಬಿರ
ಬೆಂಗಳೂರು: ಇದೇ ವರ್ಷಾಂತ್ಯಕ್ಕೆ ಕಿರಿಯರ ಹಾಕಿ ವಿಶ್ವಕಪ್ ನಡೆಯಲಿದ್ದು, ಈ ಪಂದ್ಯಾವಳಿಗಾಗಿ ಸಿದ್ಧತೆ ನಡೆಸಲು ಕಿರಿಯರ ಹಾಕಿ ತಂಡಕ್ಕೆ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ನಲ್ಲಿ ಬುಧವಾರದಿಂದ ತರಬೇತಿ ಶಿಬಿರವನ್ನು ಆರಂಭಿಸಲಾಗಿದೆ. ಮೇ 20ರವರೆಗೆ ನಡೆಯಲಿರುವ ಈ ತರಬೇತಿ ಶಿಬಿರಕ್ಕೆ ವಿಶ್ವಕಪ್ನ 37 ಸಂಭಾವ್ಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಎಐಎಫ್ ಕಿರಿಯರ ವಿಶ್ವಕಪ್ ಇದೇ ವರ್ಷ ಡಿ.6-15ರವರೆಗೆ ಮೇಜರ್ ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ ನಡೆಯಲಿದೆ.