ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆರ್‌ಸಿಬಿಗೆ ಸುಲಭ ಜಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪುಣೆ ವಾರಿಯರ್ಸ್ ವಿರುದ್ಧ 17 ರನ್‌ಗಳ ಜಯ ಸಾಧಿಸಿತು.

Mainashree
Updated On : 3 May 2013, 12:29 pm

ಪುಣೆ: ಡಿವಿಲಿಯರ್ಸ್ (ಅಜೇಯ 50) ಅರ್ಧ ಶತಕ ಮತ್ತು ಮೊಯ್ಸಿಸ್ ಹೆನ್ರಿಕೇಸ್ (ಅಜೇಯ 27) ಸ್ಫೋಟಕ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪುಣೆ ವಾರಿಯರ್ಸ್ ವಿರುದ್ಧ 17 ರನ್‌ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 170 ರನ್‌ಗಳನ್ನು ಗಳಿಸಿತು.
ಪುಣೆ ತಂಡ ಈ ಮೊತ್ತವನ್ನು ಬೆನ್ನಟಲು ಆರಂಭಿಸಿದಾಗ ಆರಂಭಿಕರಿಂದ ಉತ್ತಮ ಕಾಣಿಕೆ ಸಿಗಲಿಲ್ಲ. ಆರಂಭದಲ್ಲಿ ಬಂದ ಫಿಂಚ್ (15), ಸುಮನ್ (11), ಯುವರಾಜ್ (16) , ಸ್ಮಿತ್ (4), ಮ್ಯಾಥ್ಯೂಸ್ (32), ನಾಯರ್ (1) ಹೆಚ್ಚು ರನ್‌ಗಳಿಸಲಿಲ್ಲ. ಹಾಗಾಗಿ ತಂಡ ಸೋಲನುಭವಿಸಲು ಪ್ರಮುಖ ಕಾರಣವಾಯಿತು.
ವ್ಯರ್ಥವಾದ ಉತ್ತಪ್ಪ ಹೋರಾಟ: ಆರಂಭಿಕರಾಗಿ ಕಣಕ್ಕಿಳಿದ ಉತ್ತಪ್ಪ ತಂಡದ ಗೆಲವಿಗಾಗಿ ಉತ್ತಮ ಹೋರಾಟ ನಡೆಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಉತ್ತಪ್ಪ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ 75 ರನ್‌ಗಳಿಸಿದರು. ಆದರೆ 17.5ನೇ ಓವರ್‌ನಲ್ಲಿ ಔಟಾಗುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿ, ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ವಿಫಲರಾದರು. ಇದು ಪಂದ್ಯಕ್ಕೆ ಉತ್ತಮ ತಿರುವು ನೀಡಿತು.
ಇದ್ದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರಂಭಿಕ ಕುಸಿತದ ಹೊರತಾಗಿಯೂ ಪುಣೆಗೆ ಬೃಹತ್ ಮೊತ್ತ ದಾಖಲಿಸಿತು.
ತಂಡದ ಭರವಸೆಯ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ (21), ವಿರಾಟ್ ಕೊಹ್ಲಿ (25) ರನ್‌ಗಳಿಸಿ ಬೇಗನೆ ನಿರ್ಗಮಿಸಿದರು. ನಂತರ ಸೌರಭ್ ತಿವಾರಿ (52), ಡಿವಿಲಿಯರ್ಸ್ (50) ಹೆನ್ರಿಕೇಸ್ (27) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಅಲ್ಲದೆ ದಿಂಡಾ ಪಂದ್ಯದ 20ನೇ ಓವರ್ ಮಾಡಿದ್ದು, ಆ ಓವರ್‌ನಲ್ಲಿ 26 ರನ್ ಗಳಿಸಿದ ಡಿವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 187/3 (20 ಓವರ್)

ಸೌರಬ್ ಸಿ ರಾಹುಲ್ ಬಿ ದಿಂಡಾ 52(45), ಗೇಯ್ಲ್ ಸಿ ಭುವನೇಶ್ವರ್ ಬಿ ಸುಮನ್ 21(21), ಕೊಹ್ಲಿ ಬಿ ದಿಂಡಾ 25(18), ಡಿವಿಲಿಯರ್ಸ್ ಅಜೇಯ 50(23), ಹೆನ್ರಿಕೇಸ್ ಅಜೇಯ 27(13), ಇತರೆ 12
ವಿಕೆಟ್ ಪತನ: 1-36, 2-99, 3-119
ಬೌಲಿಂಗ್: ಭುವನೇಶ್ವರ್ 3-0-20-0, ಮೆಂಡಿಸ್ 4-0-25-0, ಸುಮನ್ 2-0-15-1, ಮ್ಯಾಥ್ಯೂಸ್ 2-0-23-0, ರಾಹುಲ್ 4-0-36-0, ಯುವರಾಜ್ 1-0-15-0, ದಿಂಡಾ 4-0-52-2.
ಪುಣೆ ವಾರಿಯರ್ಸ್: 170/9 (20 ಓವರ್)
ರಾಬಿನ್ ಉತ್ತಪ್ಪ ಸಿ ಸಿಂಗ್ ಬಿ ಕಾರ್ತಿಕ್ 75 (45), ಫಿಂಚ್ ಬಿ ಹೆನ್ರಿಕೇಸ್ 15 (11), ಸುಮನ್ ರನೌಟ್ (ಮುರಳೀಧರನ್/ಅರುಣ್ ಕಾರ್ತಿಕ್) 11 (14), ಯುವರಾಜ್ ಸಿಂಗ್ ಸಿ ಡಿವಿಲಿಯರ್ಸ್ ಬಿ ವಿನಯ್ ಕುಮಾರ್ 16 (11), ಸ್ಮಿತ್ ಸಿ ಅರುಣ್ ಕಾರ್ತಿಕ್ ಬಿ ವಿನಯ್ ಕುಮಾರ್ 4 (4), ಏಂಜೆಲೊ ಮ್ಯಾಥ್ಯೂಸ್ 32 (19), ಅಭಿಷೇಕ್ ನಾಯರ್ 1 (3), ಭುವನೇಶ್ವರ್ ಕುಮಾರ್ ಸಿ ಕೊಹ್ಲಿ ಬಿ ಸಿಂಗ್ 2 (3), ಅಜಂತಾ ಮೆಂಡಿಸ್ ಎಲ್‌ಬಿಡಬ್ಲ್ಯೂ ಬಿ ಗೇಯ್ಲ್ 2 (4), ಅಶೋಕ್ ದಿಂಡಾ ಅಜೇಯ 6 (5), ರಾಹುಲ್ ಶರ್ಮಾ ಅಜೇಯ 0 (1). ಇತರೆ 6.
ವಿಕೆಟ್ ಪತನ: 1-20, 2-46, 3-77, 4-81, 5-144, 6-153, 8-159, 8-162, 9-165.
ಬೌಲಿಂಗ್: ಮುರಳಿ ಕಾರ್ತಿಕ್ 4-0-29-2, ಆರ್.ಪಿ. ಸಿಂಗ್ 4-0- 27-1, ಹೆನ್ರಿಕೆಸ್ 4-0-44-1, ವಿನಯ್ ಕುಮಾರ್ 4-0-31-3, ಮುರಳೀಧರನ್ 3-0-32-0, ಗೇಯ್ಲ್ 1-0-5-1.

ಡಿವಿಲಿಯರ್ಸ್ ದಭಾಂಗ್
ರನ್ 50
ಎಸೆತ 23
ಬೌಂಡರಿ 6
ಸಿಕ್ಸರ್ 2

ಐಪಿಎಲ್ ಅಂಕಪಟ್ಟಿ
ತಂಡ    ಪಂದ್ಯ    ಗೆಲವು    ಸೋಲು    ಅಂಕ    ರನ್‌ರೇಟ್
ಸಿಎಸ್‌ಕೆ    11    9    2    18    0.737                  
ಆರ್‌ಸಿಬಿ    11    7    4    14    0.708                                                
ರಾಜಸ್ಥಾನ್     9    6    3    12    0.577             
ಮುಂಬೈ     10    6    4    12     0.134
ಸನ್‌ರೈಸರ್ಸ್    10    6    4    12    -0.102   
ಪಂಜಾಬ್    10    4    6    8    0.080
ಕೆಕೆಆರ್    10    3    7    6    -0.104
ಡೆಲ್ಲಿ ಡೇರ್‌ಡೆವಿಲ್    10    3    7    6    -0.599
ಪುಣೆ ವಾರಿಯರ್ಸ್    11    2    9     4    -1.382


ಐಪಿಎಲ್ ಟಾಪರ್ಸ್

ಬ್ಯಾಟ್ಸ್‌ಮನ್    ಪಂದ್ಯ    ರನ್    ಸರಾಸರಿ    ಗರಿಷ್ಠ
ಕ್ರಿಸ್‌ಗೇಯ್ಲ್    11    505    72.14    175
ಮೈಕಲ್ ಹಸ್ಸಿ    10    485    60.62    95
ವಿರಾಟ್ ಕೊಹ್ಲಿ    11    391    39.10    93
ರೋಹಿತ್ ಶರ್ಮಾ    10    375    53.57    79
ರೈನಾ    11    359    44.87    100
ಬೌಲರ್    ಪಂದ್ಯ    ವಿಕೆಟ್    ಸರಾಸರಿ    ಗರಿಷ್ಠ
ಡ್ವೇನ್ ಬ್ರಾವೊ    11    19    16.94    3/27
ವಿನಯ್ ಕುಮಾರ್    11    18    18.88    3/18
ಜೇಮ್ಸ್ ಫಾಕ್ನರ್    7    16    10.37    5/20
ಅಮಿತ್ ಮಿಶ್ರಾ    10    16    14.81    4/19
ನಾರಾಯಣ್    10    15    15.33    4/13

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement