ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಖೇಲ್‌ರತ್ನ ಪ್ರಶಸ್ತಿಗೆ ಸೋಮ್ ಹೆಸರು

Mainashree
Updated On : 3 May 2013, 12:13 pm

ನವದೆಹಲಿ: ರಾಷ್ಟ್ರೀಯ ಟೆನಿಸ್ ಸಂಸ್ಥೆ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು, ಅಖಿಲ ಭಾರತ ಟೆನಿಸ್ ಸಂಸ್ಥೆ ಸೋಮ್‌ದೇವ್ ದೇವ್‌ವರ್ಮನ್ ಅವರ ಹೆಸರನ್ನು ಖೇಲ್‌ರತ್ನ ಪ್ರಶಸ್ತಿಗೆ ನಾಮಾಂಕಿತ ಮಾಡಲಾಗಿದೆ. ಸೋಮ್‌ದೇವ್ ಭಾರತದ ಪರವಾಗಿ ಈ ಹಿಂದೆ ಸಾಕಷ್ಟು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿದ್ದು, 2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಏಕೈಕ ಚಿನ್ನದ ಪದಕವನ್ನು ಗಳಿಸಿದ್ದರು. ಅಲ್ಲದೇ ಈ ವರ್ಷದ ಆರಂಭದಲ್ಲಿ ಡೇವಿಸ್ ಕಪ್ ಸೇರಿದಂತೆ ಟೆನಿಸ್‌ನಲ್ಲಿ ಕೆಲವು ಬದಲಾವಣೆ ತರಬೇಕೆಂಬ ಬೇಡಿಯೊಂದಿಗೆ ಎಐಟಿಎ ವಿರುದ್ಧ ಇತರ ಆಟಗಾರರೊಂದಿಗೆ ಬಂಡಾಯವೆದ್ದಿದ್ದರು. ಅಲ್ಲದೆ ಹಿರಿಯ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜತೆಗೆ ಭಾರತೀಯ ಟೆನಿಸ್ ಆಟಗಾರರ ಸಂಸ್ಥೆಯನ್ನು ರಚಿಸಿದರು. ಸೋಮ್‌ದೇವ್ ಹೊರತಾಗಿ ಭಾರತದ ಹಿರಿಯ ಟೆನಿಸ್ ತಾರೆ ವಿಜಯ್ ಅಮೃತ್‌ರಾಜ್ ಅವರ ಹೆಸರನ್ನು ಧ್ಯಾನ್‌ಚಂದ್ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. 1976ರಲ್ಲಿ ವಿಜಯ್ ತಮ್ಮ ಸಹೋದರನ ಜತೆ ವಿಂಬಲ್ಡನ್ ಸೆಮಿಫೈನಲ್ ಹಂತದವರೆಗೂ ತಲುಪಿದ್ದರು. ಪ್ರಸ್ತುತ ಡೇವಿಸ್ ಕಪ್ ತಂಡದ ತರಬೇತುದಾರ ಜೀಶಾನ್ ಅಲಿ ಅವರನ್ನು ಹಾಗೂ ಹಿರಿಯ ಆಟಗಾರ್ತಿ ರಶ್ಮಿ ಚಕ್ರವರ್ತಿ ಅವರ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಡೇವಿಸ್ ಕಪ್‌ನ ಮಾಜಿ ತರಬೇತುದಾರ ನಂದನ್ ಬಾಲ್ ಅವರ ಹೆಸರನ್ನು ಎಐಟಿಎ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement