ಚೆಸ್: 3ನೇ ಸ್ಥಾನಕ್ಕೆ ಆನಂದ್ ತೃಪ್ತಿ
ಸೆಂಟ್ ಪೀಟರ್ಸ್ಬರ್ಗ್: ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿರುವ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಅಲಿಖೆನ್ ಸ್ಮಾರಕ ಚೆಸ್ ಚಾಂಪಿಯನ್ಷಿಪ್ನ ಅಂತಿಮ ಸುತ್ತಿನಲ್ಲಿ ಬೋರಿಸ್ ಜೆಲ್ಫೆಡ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಪಂದ್ಯಾವಳಿಯಲ್ಲಿ 5 ಅಂಕಗಳನ್ನು ಪಡೆದಿರುವ ಆನಂದ್ ಮೂರನೇ ಸ್ಥಾನಗಳಿಸಿದ್ದಾರೆ. ಜೆಲ್ಫೆಡ್ ಅವರಿಂದ ಉತ್ತಮ ಪೈಪೋಟಿ ಬಂದ ಕಾರಣ ಆನಂದ್ ಈ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಬೇಕಾಯಿತು. ಇನ್ನು ಬೋರಿಸ್ ಜೆಲ್ಫೆಂಡ್ 5.5 ಅಂಕಗಳು ಹಾಗೂ ಅರೋನಿಯನ್ 5.5 ಅಂಕಗಳೊಂದಿಗೆ ಮೊದಲ 2 ಸ್ಥಾನಗಳಲ್ಲಿದ್ದಾರೆ.