ಕೆಕೆಆರ್‌ಗೆ ನಿರಾಯಾಸ ಗೆಲವು
ಕೋಲ್ಕತಾ: ಮಾರಕ ಬೌಲಿಂಗ್ ದಾಳಿ ಹಾಗೂ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಕೋಲ್ಕತಾ ನೈಟ್‌ರೈಡರ್ಸ್ ತಂಡ ರಾಜಸ್ಥಾನದ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ತಂಡ, ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಆನಂತರ ಬ್ಯಾಟಿಂಗ್‌ಗೆ ಇಳಿದ ಕೋಲ್ಕತಾ ತಂಡ, 17.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ, ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಆರಂಭದಿಂದಲೇ ಎಡುವುತ್ತಾ ಸಾಗಿತು. ಕೇವಲ 20 ರನ್ ಮೊತ್ತಕ್ಕೆ ಆರಂಭಿಕ ರಹಾನೆ ಅವರನ್ನು ಕಳೆದುಕೊಂಡ ರಾಜಸ್ಥಾನ, ಆನಂತರ, ಕೆಲವೇ ನಿಮಿಷಗಳಲ್ಲಿ ಫಾಕ್ಸರ್‌ರನ್ನೂ ಕಳೆದುಕೊಂಡಿತು.
ಆಗ ಅಂಗಣಕ್ಕಿಳಿದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಶೇನ್ ವಾಟ್ಸನ್ ಅವರೊಂದಿಗೆ ತಕ್ಕ ಸಾಥ್ ನೀಡುವ ಮೂಲಕ ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 44 ರನ್ ಕಲೆ ಹಾಕಿದರು. ಅಬ್ಬರದ ಹೊಡೆತಕ್ಕೆ ಮುಂದಾಗಿದ್ದ ಸ್ಯಾಮ್ಸನ್ ಅವರು ರಜತ್ ಭಾಟಿಯಾ ಬೌಲಿಂಗ್‌ನಲ್ಲಿ ಜಾಕ್ ಕಾಲಿಸ್‌ಗೆ ಕ್ಯಾಚ್ ನೀಡಿದರು. ಅಲ್ಲಿಗೆ ಕೋಲ್ಕತಾದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವ ಕನಸು ಭಗ್ನಗೊಂಡಿತು. ಇದು ತಂಡದ ಮೊತ್ತ 130 ರನ್‌ಗಳ ಗಡಿ ದಾಟಲು ನೆರವಾಯಿತು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿದರೆ, ಓವೈಸ್ ಶಾ (24) ಕೊಂಚ ಆಶ್ರಯವಾದರು. ಆದರೆ, ಇತರ ಬ್ಯಾಟ್ಸ್‌ಮನ್‌ಗಳು ಮಿಂಚಲು ವಿಫಲವಾದರು.
ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಜಯ ಗಳಿಸಲು ಅಷ್ಟೇನೂ ಕಷ್ಟವಾಗಲಿಲ್ಲ. ಗಂಭೀರ್ ಅವರನ್ನು ಬೇಗನೇ ಕಳೆದುಕೊಂಡರೂ, ಉಳಿದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯು ಬ್ಯಾಟಿಂಗ್‌ನಿಂದ ತಂಡ ಅನಾಯಾಸ ಗೆಲವು ಸಾಧಿಸಿತು.
ಕೆಕೆಆರ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್ (12), ಬಿಸ್ಲಾ (29) ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಕಾಲಿಸ್ (33), ಯೂಸುಫ್ (49) ಅಜೇಯರಾಗುಳಿದು ಗೆಲವಿನ ನಗೆ ಬೀರಿದರು.
ಸ್ಕೋರ್ ಬೋರ್ಡ್
ರಾಜಸ್ಥಾನ ರಾಯಲ್ಸ್ 132/6(20 ಓವರ್)
ವ್ಯಾಟ್ಸನ್ ಎಲ್‌ಬಿಡಬ್ಲ್ಯೂ ನಾರಾಯಣ್ 35(35), ರಹಾನೆ ಸ್ಟಂಪ್ ಬಿಸ್ಲಾ ಬಿ ಸೇನನಾಯಕೆ 6(10), ಫಾಕ್ನರ್ ಸಿ ಗಂಭೀರ್ ಬಿ ಇಕ್ಬಾಲ್ 1(4), ಸ್ಯಾಮ್ಸನ್ ಸಿ ಕಾಲಿಸ್ ಬಿ ಭಾಟಿಯಾ 40(36), ಯಾಗ್ನಿಕ್ ಬಿ ಸೇನನಾಯಕೆ 10(6), ಓವೈಸ್ ಶಾ ಬಿ ಕಾಲಿಸ್ 24(22), ಬಿನ್ನಿ ಅಜೇಯ 3(5), ದ್ರಾವಿಡ್ ಅಜೇಯ 6(3), ಇತರೆ 7
ವಿಕೆಟ್ ಪತನ: 1-20, 2-27, 3-71, 4-83
ಬೌಲಿಂಗ್: ನರ್ವಾಲ್ 2-0-17-0, ಸೇನನಾಯಕೆ 4-0-26-2, ಇಕ್ಬಾಲ್ 3-0-22-1, ಕಾಲಿಸ್ 3-0-25-1, ನಾರಾಯಣ್ 4-0-20-1, ಭಾಟಿಯಾ 4-0-21-1.
ಕೋಲ್ಕತಾ ನೈಟ್‌ರೈಡರ್ಸ್ 133/2 (17.2 ಓವರ್)
ಗಂಭೀರ್ ಸ್ಟಂಪ್ ಯಾಗ್ನಿಕ್ ಬಿ ವ್ಯಾಟ್ಸನ್ 12(14), ಬಿಸ್ಲಾ ಸಿ ರಹಾನೆ ಬಿ ಚವಾಣ್ 25(29), ಕಾಲಿಸ್ ಅಜೇಯ 33(30), ಯೂಸುಫ್ ಅಜೇಯ 49(35), ಇತರೆ 10.
ವಿಕೆಟ್ ಪತನ: 1-41, 2-55
ಬೌಲಿಂಗ್: ಚವಾಣ್ 3-0-28-1, ಫಾಕ್ನರ್ 4-0-16-0, ವ್ಯಾಟ್ಸನ್ 3-0-21-1, ಹಾಗ್ 3.2-0-31-0, ತ್ರಿವೇದಿ 3-0-24-0, ಬಿನ್ನಿ 1-0-8-0.