ಟೇಬಲ್ ಟೆನಿಸ್: ಪಾಕ್ಗೆ ಪ್ರವೇಶವಿಲ್ಲ
ನವದೆಹಲಿ: ಪಾಕಿಸ್ತಾನದ ಟೇಬಲ್ ಟೆನಿಸ್ ಆಟಗಾರರಿಗೆ ಭಾರತದ ಅಧಿಕಾರಿಗಳು ವೀಸಾ ನೀಡದ ಹಿನ್ನಲೆಯಲ್ಲಿ ಪಾಕಿಸ್ತಾನದ ಯಾವುದೇ ಆಟಗಾರರು ಮೆ5 ರಿಂದ ನಡೆಯಲಿರುವ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುತ್ತಿಲ್ಲ. ನಾವು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸಿದ ಎಲ್ಲಾ ದೇಶಗಳ ಆಟಗಾರರಿಗೂ ವಿಸಾ ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ ಪಾಕಿಸ್ತಾನ ಆಟಗಾರರಿಗೆ ಭಾರತ ಸರ್ಕಾರ ವೀಸಾ ಅನುಮತಿ ನೀಡದ ಹಿನ್ನಲೆಯಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸುತ್ತಿಲ್ಲ ಎಂದು ಭಾರತೀಯ ಟೇಬಲ್ ಟೆನಿಸ್ ಅಸೋಸಿಯೇಷನ್ನ ಅಧ್ಯಕ್ಷ ಪಿ.ಸಿ ಚತುರ್ವೇದಿ ತಿಳಿಸಿದರು. ಕಳೆದ ಮಾರ್ಚ್ನಲ್ಲಿ ನಡೆದ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಕಿಸ್ತಾನದ ಸೈಕ್ಲಿಸ್ಟ್ಗಳು ವೀಸಾ ಪಡೆಯಲು ಸಾಕಷ್ಟು ಶ್ರಮವಹಿಸಿದರು ಅಲ್ಲದೆ ಕೆಲವು ಸೈಕ್ಲಿಸ್ಟ್ಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.