ತರಬೇತಿ ಶಿಬಿರದಲ್ಲಿ ಪ್ರತಿಮಾ ಆತ್ಮಹತ್ಯೆ
ಪುಣೆ: ಭಾರತದ ಭರವಸೆಯ ಅಂತಾರಾಷ್ಟ್ರಿಯ ಆರ್ಚರಿಪಟು ಪ್ರತಿಮಾ ಬೊರೊ ಇಲ್ಲಿನ ಆರ್ಮಿ ಸ್ಫೋರ್ಟ್ಸ್ ತರಬೇತಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂ ಮೂಲದ ಪ್ರತಿಮಾ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದು ಶುಕ್ರವಾರ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿನ ಫ್ಯಾನ್‌ಗೆ ಬೆಡ್‌ಶೀಟ್‌ನಿಂದ ನೇಣುಹಾಕಿಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಂಜಾನೆಯ ಅಭ್ಯಾಸಕ್ಕೆ ಪ್ರತಿಮಾ ಆಗಮಿಸದ ಹಿನ್ನಲೆಯಲ್ಲಿ ಇತರೆ ಆರ್ಚರಿಪಟುಗಳು ಆಕೆಯನ್ನು ನೋಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪ್ರತಿಮಾ ಸ್ನೇಹಿತೆಯರು ಆಕೆಯ ಕೊಠಡಿಗೆ ತೆರಳಿದಾಗ ಕೊಠಡಿ ಒಳಗಿನಿಂದ ಮುಚ್ಚಲಾಗಿತ್ತು. ನಂತರ ಬಾಗಿಲನ್ನು ತೆರೆದು ನೋಡಿದಾಗ ಪ್ರತಿಮಾ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.