ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈಡರ್ಸ್‌ಗೆ ಸಾಧಾರಣ ಸವಾಲು

Mainashree
Updated On : 3 May 2013, 11:48 am

ಕೋಲ್ಕತಾ: ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ (35) ಮತ್ತು ಸಂಜು ಸ್ಯಾಮ್ಸನ್ (40) ತಾಳ್ಮೆಯ ಬ್ಯಾಟಿಂಗ್ ನೆರವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್‌ಗೆ 133 ರನ್‌ಗಳ ಸಾಧಾರಣ ಮೊತ್ತದ ಸವಾಲೊಡ್ಡಿತು.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಕೋಲ್ಕತಾ ನೈಟ್ ರೈಡರ್ಸ್ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ತಂಡ, ಬೌಲಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ನಲ್ಲಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.
ಶೇನ್ ವ್ಯಾಟ್ಸನ್ ಅವರೊಂದಿಗೆ ಆರಂಭಿಕರಾಗಿ ಅಂಗಣಕ್ಕಿಳಿದಿದ್ದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (6) 4ನೇ ಓವರ್‌ನಲ್ಲಿ ಸುನಿಲ್ ನಾರಾಯಣ ಬೌಲಿಂಗ್‌ನಲ್ಲಿ ಎಲ್‌ಬಿಗೆ ಬಲಿಯಾಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ಜೇಮ್ಸ್ ಫಾಕ್ನರ್ (1), ಇಕ್ಬಾಲ್ ಅಬ್ದುಲ್ಲಾ ಬೌಲಿಂಗ್‌ನಲ್ಲಿ ಗೌತಮ್ ಗಂಭೀರ್‌ಗೆ ಕ್ಯಾಚ್ ನೀಡುವ ಮೂಲಕ ಮತ್ತಷ್ಟು ನಿರಾಸೆ ಮೂಡಿಸಿದರು.
ಆಗ ಅಂಗಣಕ್ಕಿಳಿದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಶೇನ್ ವಾಟ್ಸನ್ ಅವರೊಂದಿಗೆ ತಕ್ಕ ಸಾಥ್ ನೀಡುವ ಮೂಲಕ ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 44 ರನ್ ಕಲೆ ಹಾಕಿದರು. ಅಬ್ಬರದ ಹೊಡೆತಕ್ಕೆ ಮುಂದಾಗಿದ್ದ ಸ್ಯಾಮ್ಸನ್ ಅವರು ರಜತ್ ಭಾಟಿಯಾ ಬೌಲಿಂಗ್‌ನಲ್ಲಿ ಜಾಕ್ ಕಾಲಿಸ್‌ಗೆ ಕ್ಯಾಚ್ ನೀಡಿದರು. ಅಲ್ಲಿಗೆ ಕೋಲ್ಕತಾದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವ ಕನಸು ಭಗ್ನಗೊಂಡಿತು.
ಇದು ತಂಡದ ಮೊತ್ತ 130 ರನ್‌ಗಳ ಗಡಿ ದಾಟಲು ನೆರವಾಯಿತು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿದರೆ, ಓವೈಸ್ ಶಾ (24) ಕೊಂಚ ಆಶ್ರಯವಾದರು. ಆದರೆ, ಇತರ ಬ್ಯಾಟ್ಸ್‌ನ್‌ಗಳು ಮಿಂಚಲು ವಿಫಲವಾದರು.
ಪಿಚ್ ಲಾಭ ಪಡೆದ ಕೋಲ್ಕತಾ ತಂಡದ ಬೌಲರ್‌ಗಳು ನಿರಂತರವಾಗಿ ಪ್ರವಾಸಿ ರಾಜಸ್ಥಾನದ ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಕೋಲ್ಕತಾ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಸಚಿತ್ರೆ ಸೇನಾನಾಯಕೆ 2 ವಿಕೆಟ್ ಕಬಳಿಸಿದರು.
ಇಕ್ಬಾಲ್ ಅಬ್ದುಲ್ಲಾ, ಜಾಕ್ ಕಾಲಿಸ್, ಸುನಿಲ್ ನಾರಾಯಣ, ರಜತ್ ಭಾಟಿಯಾ ತಲಾ ಒಂದು ವಿಕೆಟ್ ಕಬಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement