ಟೇಬಲ್ ಟೆನಿಸ್ ಆಟಗಾರರಿಗೆ ಉತ್ತಮ ಅವಕಾಶ
ನವದೆಹಲಿ: ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ಪಂಂದ್ಯಾವಳಿಯು ಭಾನುವಾರದಿಂದ ಆರಂಭವಾಗಲಿದ್ದು, ಭಾರತದ ಟೇಬಲ್ ಟೆನಿಸ್ ಆಟಗಾರರಿಗೆ ತಮ್ಮ ತವರಿನ ಅಭಿಮಾನಿಗಳ ಮುಂದೆ ಮಿಂಚುವ ಉತ್ತಮ ಅವಕಾಶ ದೊರೆತಂತಾಗಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಆತಿಥೇಯರಿಗೆ ಸಿಂಗಾಪುರದಿಂದ ಪ್ರಬಲ ಹೋರಾಟ ದೊರಕುವ ಸಾಧ್ಯತೆಗಳಿವೆ. ಭಾರತೀಯ ಆಟಗಾರರಿಗಿಂತ ಸಿಂಗಾಪುರದ ಆಟಗಾರರು ಉನ್ನತ ರ್ಯಾಂಕಿಂಗ್ ಹೊಂದಿದ್ದು, ಇವರಿಗೆ ದೊಡ್ಡ ಸವಾಲು ನೀಡಿವ ಸಾಧ್ಯತೆಗಳಿವೆ. 2007 ಹಾಗೂ 2009ರ ಆವೃತ್ತಿಯಲ್ಲಿ ಸಿಂಗಾಪುರ ತಂಡವು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಈ ಬಾರಿ ಭಾರತೀಯ ಆಟಗಾರರಿಗೆ ಅನುಕೂಲಕರವಾದ ವೇಳಾಪಟ್ಟಿ ದೊರೆತಿರುವುದು ಆತಿಥೇಯರ ಹಾದಿ ಸುಗಮವಾಗಿದೆ.