ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೋಹಿತ್ ಪಡೆಗೆ ಜಯದ ಒತ್ತಡ

Mainashree
Updated On : 4 May 2013, 10:58 am

ಮುಂಬೈ: ಸತತ ಗೆಲವಿನ ನಾಗಾಲೋಟದಲ್ಲಿ ತೇಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದ್ದು, ಗೆಲ್ಲುವ ಫೇವರಿಟ್ ತಂಡವಾಗಿದೆ.
ಆಡಿರುವ 11 ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತು, 9 ಪಂದ್ಯದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಧೋನಿ ಪಡೆ, ಈಗಾಗಲೇ ಪಂದ್ಯಾವಳಿಯ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ. ಇನ್ನು ಮುಂಬೈ ತಂಡ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಸೋತು 6 ಪಂದ್ಯಗಳಲ್ಲಿ ಗೆಲವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆಯಲು ಮುಂದಿನ ಪಂದ್ಯಗಳಲ್ಲೂ ಜಯ ಸಾಧಿಸಬೇಕಾದ ಒತ್ತಡದಲ್ಲಿ ಸಿಲುಕಿದೆ.
ಕಳೆದ 7 ಪಂದ್ಯಗಳಲ್ಲಿ ಸತತ ಜಯ ಸಾಧಿಸುವ ಮೂಲಕ ಆತ್ಮ ವಿಶ್ವಾಸದಲ್ಲಿರುವ ಚೆನ್ನೈ ತಂಡ ಗೆಲ್ಲುವ ಫೇವರಿಟ್. ಇನ್ನು ಮುಂಬೈ ತಂಡ ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‌ಗಳ ಸೋಲನುಭವಿಸಿದ್ದು, ಈ ಪಂದ್ಯದಲ್ಲಿ ಗೆಲವು ಸಾಧಿಸಿ ಮತ್ತೆ ಜಯದ ಲಯ ಕಂಡುಕೊಳ್ಳಲೇಬೇಕಾದ ಒತ್ತಡದಲ್ಲಿ ಸಿಲುಕಿದೆ.
ಚೆನ್ನೈ ತಂಡ ತವರಿನ ಪಂದ್ಯದ ಜತೆಗೆ ಹೊರಗಿನ ಪಂದ್ಯದಲ್ಲೂ ಸಾಂಘಿಕ ಹೋರಾಟದ ಮೂಲಕ ಜಯ ಸಾಧಿಸುತ್ತಿರುವುದು ತಂಡದ ಪ್ರಮುಖ ಸಾಮರ್ಥ್ಯವಾಗಿದೆ.
ಚೆನ್ನೈ ತಂಡದಲ್ಲಿ ಹಸ್ಸಿ, ರೈನಾ, ಧೋನಿ, ಜಡೇಜಾ ಸ್ಥಿರ ಬ್ಯಾಟಿಂಗ್ ನಡೆಸುತ್ತಿರುವುದು ತಂಡಕ್ಕೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಬೌಲಿಂಗ್‌ನಲ್ಲಿ ಮೊಹಿತ್ ಶರ್ಮಾ ಉತ್ತಮವಾಗಿ ದಾಳಿ ಮಾಡುತ್ತಿದ್ದು, ಇವರಿಗೆ ಮೊರಿಸ್, ಬ್ರಾವೊ, ಅಶ್ವಿನ್, ಜಡೇಜಾ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನು ಮುಂಬೈ ತಂಡದಲ್ಲಿ ಸ್ಮಿತ್ ಸ್ವಲ್ಪ ಮಟ್ಟಿಗೆ ಫಾರ್ಮ್‌ನಲ್ಲಿದ್ದರೆ ಸಚಿನ್ ರನ್‌ಗಳಿಸುತ್ತಿಲ್ಲ. ದಿನೇಶ್ ಕಾರ್ತಿಕ್ ಕಳೆದ ಮೂರ್ನಾಲ್ಕು ಪಂದ್ಯಗಳಲ್ಲಿ ಮಂಕಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಹಾಗೂ ಪೊಲಾರ್ಡ್ ಅಂತಿಮ ಓವರ್‌ಗಳಲ್ಲಿ ರನ್‌ಗಳಿಸುತ್ತಿದ್ದು ತಂಡ ಇವರ ಮೇಲೆ ಅವಲಂಬಿತವಾಗಿದೆ. ಇನ್ನು ಬೌಲಿಂಗ್‌ನಲ್ಲಿ ಮಾಲಿಂಗಾ, ಜಾನ್ಸನ್ ವೇಗದ ಅಸ್ತ್ರವಾದರೆ ಹರ್ಭಜನ್, ಓಜಾ ಸ್ಪಿನ್ ವಿಭಾಗದ ಪ್ರಮುಖರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement