ವಾಂಖೆಡೆ ವಿವಾದ: ವ್ಯಥೆಪಟ್ಟ ಶಾರೂಖ್ ಖಾನ್
ಕೋಲ್ಕತಾ: ಕೋಲ್ಕತಾ ನೈಟ್ರೈಡರ್ಸ್ ತಂಡದ ಮಾಲಿಕ ಶಾರುಖ್ ಖಾನ್ ಕಳೆದ ವರ್ಷ ವಾಂಖೆಡೆ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಜತೆ ಜಗಳವಾಡಬಾರದಿತ್ತು ಎಂದು ಕೊನೆಗೂ ವ್ಯಥೆಪಟ್ಟಿದ್ದಾರೆ.
ಹಿಂದಿನ ಘಟನೆಗಳನ್ನು ಮೆಲುಕು ಹಾಕುವುದಾದರೆ ನಾನು ಆ ರೀತಿ ವರ್ತಿಸಬಾರದಿತ್ತು, ಇನ್ನೊಂದೆಡೆ ನಾನು ಉದ್ದೇಶಪೂರ್ವಕವಾಗಿ ಆ ರೀತಿ ವರ್ತಿಸಿಲ್ಲ ಎಂದು ಶಾರೂಖ್ ತಿಳಿಸಿದ್ದಾರೆ.
ಮೇ 7ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಕೆಕೆಆರ್ ತಂಡ ಸೆಣೆಸಲಿದ್ದು, ಶಾರೂಖ್ ಅವರನ್ನು ವಾಂಖೆಡೆ ಕ್ರೀಡಾಂಗಣಕ್ಕೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಈ ಪಂಂದ್ಯಕ್ಕೆ ಶಾರೂಖ್ ಆಗಮಿಸಲು ಸಾಧ್ಯವಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರೂಖ್ ನಾನು ಈ ಕುರಿತು ಮಾತನಾಡಿ ತಪ್ಪು ಮಾಹಿತಿ ನೀಡಲು ಬಯಸುವುದಿಲ್ಲ, ಆದರೆ ಒಂದು ವೇಳೆ ನಾನು ಕ್ರೀಡಾಂಗಣಕ್ಕೆ ಆಗಮಿಸಿದರೆ ಅವರು ನನ್ನನ್ನು ಶೂಟ್ ಮಾಡುವರೇ ಎಂದು ಪ್ರಶ್ನಿಸಿದರು.