ಕಿರಿಯರ ವೇಟ್ಲಿಫ್ಟಿಂಗ್: ಮೀರಾಗೆ ಮೂರು ಕಂಚು
ನವದೆಹಲಿ: ಕಿರಿಯರ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸಾಯಿಖಾಮ್ ಮೀರಾಬಾಯಿ ಚಾನು ಅವರು ಮಹಿಳೆಯರ 48ಕೆಜಿ ವಿಭಾಗದಲ್ಲಿ ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಚಾಂಪಿಯನ್ಷಿಪ್ ಲೀಮಾದ ಪೇರುನಲ್ಲಿ ಭಾನುವಾರ ಆರಂಭವಾಗಿದೆ. ಮೀರಾಬಾಯಿ ಸ್ನ್ಯಾಚ್ (72ಕೆಜಿ) ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ (93ಕೆಜಿ) ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮೂರು ವಿಭಾಗಗಳಲ್ಲಿ ಮೀರಾ ಒಟ್ಟು 165ಕೆಜಿ ಭಾರ ಎತ್ತಿದರು. ಈ ಮೂರು ವಿಭಾಗಗಲ್ಲಿ ಚೀನಾದ ಗುವಾನ ಚುನಾಯಿನ್ ಚಿನ್ನದ ಪದಕ ಬಾಚಿಕೊಂಡರು. ಗುವಾನಗೆ ಇದು ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಬಾಲಕರ 56ಕೆಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಅಪುರ್ಬಾ ಚೆಟಿಯಾ ಪದಕ ಗೆಲ್ಲುವುದರಿಂದ ವಂಚಿತರಾಗಿದ್ದಾರೆ. ಈ ವಿಭಾಗದ ಕ್ಲೀನ್ ಮತ್ತು ಜರ್ಕ್ನಲ್ಲಿ ಚೀನಾದ ವೀ ಕ್ಸಿಮೆಂಗ್ ಚಿನ್ನದ ಪದಕ ಗೆದ್ದುಕೊಂಡರೆ, ಸ್ನಾಚ್ ವಿಭಾಗದಲ್ಲಿ ಟರ್ಕಿಯ ಸಹಿನಾ ಮುಮ್ಮರ್ ಚಿನ್ನ ಗೆದ್ದುಕೊಂಡರು.