ಚೆನ್ನೈಗೆ ವಿಶ್ವ ಚೆಸ್
ನವದೆಹಲಿ: ತಮಿಳುನಾಡಿನ ರಾಜಧಾನಿ ಚೆನ್ನೈಗೆ ವಿಶ್ವ ಚೆಸ್ ಚಾಂಪಿಯನ್ಷಿಪ್ನ ಆತಿಥ್ಯ ದೊರಕಿದೆ. ಪಂದ್ಯಾವಳಿಯಲ್ಲಿ ಭಾರತದ ವಿಶ್ವನಾಥನ್ ಆನಂದ್ ತಮ್ಮ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ವಿಶ್ವದ ನಂ.1 ಆಟಗಾರ ನಾರ್ವೇದ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಎದುರಿಸಲಿದ್ದಾರೆ. ಆದರೆ, ಕಾರ್ಲ್ಸೆನ್ ಚೆನ್ನೈನಲ್ಲಿ ಆಡಲು ಸಿದ್ಧವಿರಲಿಲ್ಲವಂತೆ, ಪಂದ್ಯಾವಳಿ ಪ್ಯಾರೀಸ್ನಲ್ಲಿ ನಡೆಯಬೇಕು ಎಂಬುದು ಕಾರ್ಲ್ಸೆನ್ ವಾದವಾಗಿತ್ತಂತೆ. ಆದಾಗ್ಯೂ, ವಿಶ್ವ ಚೆಸ್ ಫೆಡರೇಷನ್ ಅಜರ್ಬೈಜನ್ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಚೆನ್ನೈಯನ್ನೇ ಅಧಿಕೃತ ಸ್ಥಳವನ್ನಾಗಿ ಖಚಿತಪಡಿಸಿದೆ.