ಫುಟ್ಬಾಲ್ ಸಂಸ್ಥೆಗೇ ಮಾಹಿತಿ ಇಲ್ಲ!
ನವದೆಹಲಿ: ಶೀಘ್ರದಲ್ಲೇ ಆರಂಭಗೊಳ್ಳಲಿರುವ ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ಪಂದ್ಯಾವಳಿಗೆ ಭಾರತ ತಂಡವನ್ನು ಕಳುಹಿಸಬೇಕೇ ಬೇಡವೇ ಎಂಬುದರ ಬಗ್ಗೆ ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಆದರೆ, ಇಪಿಎಲ್ನ ವೇಳಾಪಟ್ಟಿಯಲ್ಲಿ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡು ಅಚ್ಚರಿಗೆ ಕಾರಣವಾಗಿದೆ.
ಇಪಿಎಲ್ನಲ್ಲಿ ಪಾಲ್ಗೊಳ್ಳಲಿರುವ ಫಲ್ಹಾಮ್ ಫುಟ್ಬಾಲ್ ಸಂಸ್ಥೆ (ಯುಕೆ)ಯ ಅಧಿಕೃತ ವೆಬ್ಸೈಟ್ನಲ್ಲಿ ಇಪಿಎಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಭಾರತ ಆಡಲಿರುವ ಪಂದ್ಯಗಳ ಮಾಹಿತಿ ಲಭ್ಯವಾಗಿದೆ. ವೆಬ್ಸೈಟ್ನಲ್ಲಿನ ಮಾಹಿತಿ ಪ್ರಕಾರ, ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಜೂನ್. 1ರಂದು ಈ ಪಂದ್ಯ ನಡೆಯಲಿದೆ. ಇನ್ನು, ಜೂನ್ 4ರಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಭಾರತ- ಪಾಕಿಸ್ತಾನ ತಂಡಗಳು ಸೆಣೆಸಲಿವೆ.