ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಜಸ್ಥಾನಕ್ಕೆ ಬೃಹತ್ ಸವಾಲು

Mainashree
Updated On : 5 May 2013, 11:49 am

ಜೈಪುರ: ರಾಬಿನ್ ಉತ್ತಪ್ಪ (54) ಅರ್ಧ ಶತಕ ಮತ್ತು ಆರೋನ್ ಫಿಂಚ್ (45) ಅವರ ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಪುಣೆ ವಾರಿಯರ್ಸ್ ತಂಡ ರಾಜಸ್ಥಾನ ರಾಯಲ್ಸ್‌ಗೆ 179 ರನ್‌ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ರಾಜಸ್ಥಾನ ರಾಯಲ್ಸ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪುಣೆ ವಾರಿಯರ್ಸ್ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು.
41 ಎಸೆತಗಳನ್ನು ಎದುರಿಸಿದ ಉತ್ತಪ್ಪ ಎಸೆತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದರೆ, ಫಿಂಚ್ ಮೊತ್ತದಲ್ಲಿ 7 ಬೌಂಡರಿಗಳು ಸೇರಿದ್ದವು. ಇಬ್ಬರ ಜತೆಯಾಟದಲ್ಲಿ ಮೊದಲ ವಿಕೆಟ್‌ಗೆ 97 ರನ್ ಕಲೆ ಹಾಕುವ ಮೂಲಕ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿದ್ದರು.
ಸಮರ್ಥ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಫಿಂಚ್ 11ನೇ ಓವರ್‌ನಲ್ಲಿ ಕೂಪರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಯುವರಾಜ್ ಸಿಂಗ್ (15) ಸ್ಫೋಟಕ ಹೊಡೆಕ್ಕೆ ಮುಂದಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಿದ್ದಾರ್ಥ್ ತ್ರಿವೇದಿ ಬೌಲಿಂಗ್‌ನಲ್ಲಿ ಅವರು ಕೂಪರ್‌ಗೆ ಕ್ಯಾಚ್ ನೀಡಿದರು.
ಆಗ ಬಂದ ಮಿಚೆಲ್ ಮಾರ್ಷ್ 21 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ತಂಡದ ಮೊತ್ತ 170ರ ಗಡಿ ದಾಟುವಂತೆ ನೋಡಿಕೊಂಡರು. ಮಿಚೆಲ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು.

ಸ್ಕೋರ್ ಬೋರ್ಡ್ (ಅಪೂರ್ಣ)
ಪುಣೆ 178/4 (20 ಓವರ್)
ಉತ್ತಪ್ಪ ರನೌಟ್ (ಸ್ಯಾಮ್ಸನ್) 54 (41), ಫಿಂಚ್ ಬೌಲ್ಡ್ ಕೂಪರ್ 45 (32), ಯುವರಾಜ್ ಸಿ ಕೂಪರ್ ಬಿ ತ್ರಿವೇದಿ 15 (11), ಮಿಚೆಲ್ ಮಾರ್ಷ್ ಅಜೇಯ 35 (21), ಮ್ಯಾಥ್ಯೂವ್ಸ್  ಸಿ ರಹಾನೆ ಬಿ ಫಾಕ್ನರ್ 18 (15), ರಾವತ್ 0 (0), ಇತರೆ 11.
ವಿಕೆಟ್ ಪತನ: 1-97, 2-124, 3-129, 4-170.
ಬೌಲಿಂಗ್: ಚಾಂಡಿಲಾ 2-0-23-0, ಫಾಕ್ನರ್ 4-0-35-1, ವ್ಯಾಟ್ಸನ್ 4-0-29-0, ಕೂಪರ್ 4-0-39-1, ತ್ರಿವೇದಿ 4-0-33-1, ಬಿನ್ನಿ 2-0-19-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement