ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಜಸ್ಥಾನಕ್ಕೆ ರೋಚಕ ಜಯ

Rashmi Kasaragodu
Updated On : 6 May 2013, 12:09 pm

ಜೈಪುರ: ನಿಜಕ್ಕೂ ಅಲ್ಲಿ ಗೆದ್ದಿದ್ದು ಬ್ಯಾಟ್ಸ್‌ಮನ್‌ಗಳು. ಎರಡೂ ತಂಡಗಳಿಂದ ಹೊರಹೊಮ್ಮಿದ್ದು ಭರ್ಜರಿ ಬ್ಯಾಟಿಂಗ್. ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಪುಣೆ ವಾರಿಯರ್ಸ್ ನಡುವಿನ ಪಂದ್ಯ ಪ್ರೇಕ್ಷಕರಿಗೆ ಉತ್ತಮ ಆಟದ ರಸದೌತಣ ನೀಡಿತು.
ರೋಮಾಂಚಕವಾಗಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ, 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿ, 179 ರನ್ ಮೊತ್ತ ನೀಡಿದ್ದ ಪುಣೆ ತಂಡದಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತ ರಾಜಸ್ಥಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ, ಜಯದ ಮಂದಹಾಸ ಬೀರಿತು.
ಪುಣೆ ನೀಡಿದ್ದ ಸವಾಲಿನ ಬೆನ್ನಟ್ಟಲು ಕ್ರೀಸ್‌ಗೆ ಇಳಿದ ರಾಜಸ್ಥಾನದ ಆರಂಭಿಕರಾದ ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ, ಮೊದಲ ವಿಕೆಟ್‌ಗೆ 98 ರನ್‌ಗಳ ಭರ್ಜರಿ ಜೊತೆಯಾಟ ನೀಡಿ, ಉತ್ತಮ ಅಡಿಪಾಯ ಹಾಕಿದರು. ಆನಂತರ, ಮಧ್ಯಮ ಕ್ರಮಾಂಕದ ಸ್ಟುವರ್ಟ್ ಬಿನ್ನಿ 13 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ, ರಾಜಸ್ಥಾನ ರಾಯಲ್ಸ್ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್‌ಗೆ ಇಳಿದಿದ್ದ ಪುಣೆಗೆ ಆರಂಭಿಕರಾದ ರಾಬಿನ್ ಉತ್ತಪ್ಪ (54) ಹಾಗೂ ಫಿಂಚ್ (45) ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟವಾಡಿದರು. ಇವರಿಬ್ಬರ ವಿಕೆಟ್ ಪತನಗೊಂಡ ನಂತರವೂ ಯುವರಾಜ್ ಸಿಂಗ್ (15), ಏಂಜೆಲೋ ಮ್ಯಾಥ್ಯೂಸ್ ಅವರು ಬಿರುಸಿನ ಆಟಕ್ಕೆ ಮುಂದಾದರೂ, ಹೆಚ್ಚು ಆಡಲಿಲ್ಲ. ಆದರೆ, ಮಿಚೆಲ್ ಮಾರ್ಷ್ ಅವರ ಅಜೇಯ 35 ರನ್ (21 ಎಸೆತ) ನೆರವಿನಿಂದ ಪುಣೆ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಸ್ಕೋರ್ ಬೋರ್ಡ್


ಪುಣೆ 178/4 (20 ಓವರ್)
ಉತ್ತಪ್ಪ ರನೌಟ್ (ಸ್ಯಾಮ್ಸನ್) 54 (41), ಫಿಂಚ್ ಬೌಲ್ಡ್ ಕೂಪರ್ 45 (32), ಯುವರಾಜ್ ಸಿ ಕೂಪರ್ ಬಿ ತ್ರಿವೇದಿ 15 (11), ಮಿಚೆಲ್ ಮಾರ್ಷ್ ಅಜೇಯ 35 (21), ಮ್ಯಾಥ್ಯೂವ್ಸ್  ಸಿ ರಹಾನೆ ಬಿ ಫಾಕ್ನರ್ 18 (15), ರಾವತ್ 0 (0), ಇತರೆ 11.
ವಿಕೆಟ್ ಪತನ: 1-97, 2-124, 3-129, 4-170.
ಬೌಲಿಂಗ್: ಚಾಂಡಿಲಾ 2-0-23-0, ಫಾಕ್ನರ್ 4-0-35-1, ವ್ಯಾಟ್ಸನ್ 4-0-29-0, ಕೂಪರ್ 4-0-39-1, ತ್ರಿವೇದಿ 4-0-33-1, ಬಿನ್ನಿ 2-0-19-0.
ರಾಜಸ್ಥಾನ : 182/5
 (19.5 ಓವರ್)
ರಾಹುಲ್ ದ್ರಾವಿಡ್ ಸಿ ಮಾರ್ಷ್ ಬಿ ಮ್ಯಾಥ್ಯೂಸ್ 58 (40), ಅಜಿಂಕ್ಯ ರಹಾನೆ ಸಿ ಶರ್ಮಾ ಬಿ ಭುವನೇಶ್ವರ್ ಕುಮಾರ್ 67 (48), ಶೇನ್ ವ್ಯಾಟ್ಸನ್ ಬಿ ಪಾರ್ನೆಲ್ 5 (5), ಬ್ರಾಡ್ ಹಾಡ್ಜ್ ಸಿ ಭುವನೇಶ್ವರ್ ಕುಮಾರ್ ಬಿ ಪಾರ್ನೆಲ್ 4 (5), ಸ್ಟುವರ್ಟ್ ಬಿನ್ನಿ ಅಜೇಯ 32 (13), ಸ್ಟುವರ್ಟ್ ಬಿನ್ನಿ ಅಜೇಯ 32 (13), ಸ್ಯಾಮ್ಸನ್ ಸಿ ಉದಿತ್ ಬಿರ್ಲಾ ಬಿ ಪಾರ್ನೆಲ್ 10 (6), ಫಾಕ್ನರ್ ಅಜೇಯ 3 (2). ಇತರೆ 3.
ವಿಕೆಟ್ ಪತನ: 1-98, 2-128, 3-136, 4-150, 5-175.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-38-1, ಉಪಾಧ್ಯಾಯ್ 3-0-29-0, ಪಾರ್ನೆಲ್ 3.5-0-27-3, ರೋಹಿತ್ ಶರ್ಮಾ 4-0-38-0, ಯುವರಾಜ್ ಸಿಂಗ್ 2-0-16-0, ಏಂಜೆಲೋ ಮ್ಯಾಥ್ಯೂಸ್ 3-0-34-1.

ಪಂದ್ಯಶ್ರೇಷ್ಠ; ಅಜಿಂಕ್ಯ ರಹಾನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement