ಸತತ 3 ಕ್ಯಾಚ್ ಕೈಬಿಟ್ಟ ಪೊಲಾರ್ಡ್
ಮುಂಬೈ: ವೆಸ್ಟ್ ಇಂಡೀಸ್‌ನ ಆಲ್ರೌಂಡ್ ಆಟಗಾರ ಕೀರನ್ ಪೊಲಾರ್ಡ್ ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಘಟನೆ ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ನಡೆದಿದೆ. ಒಂದೇ ಓವರ್‌ನಲ್ಲಿ ಸತತವಾಗಿ ಮೂರು ಕ್ಯಾಚ್‌ಗಳನ್ನು, ಅದು ಒಬ್ಬನೇ ಬ್ಯಾಟ್ಸ್‌ಮನ್ ಎದುರಿಸಿದ ಹೊಡೆತವನ್ನು ಕೈಬಿಟ್ಟದ್ದು ಪೊಲಾರ್ಡ್ ಜೀವನಪೂರ್ತಿ ನೆನಪಿನಲ್ಲಿಕೊಳ್ಳುವಂತಹ ಘಟನೆಯಾಗಿದೆ. ವೇಗಿ ಮಿಚೆಲ್ ಜಾನ್ಸನ್ ಬೌಲಿಂಗ್‌ನಲ್ಲಿ ಮೈಕಲ್ ಹಸ್ಸಿಗೆ ಸತತ ಮೂರು ಬಾರಿ ಜೀವದಾನ ಮಾಡಿದ ಕೀರನ್ ಪೊಲಾರ್ಡ್ ನಿರಾಸೆ ಮೂಡಿಸಿದರು.