ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಂಗ್ಲ ಪತ್ರಿಕೆ, ಧೋನಿ ವಿರುದ್ಧ ಪ್ರಕರಣ ದಾಖಲು

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ವಿಷ್ಣುವಿನ ರೂಪದಲ್ಲಿ ವಿನ್ಯಾಸಗೊಳಿಸಿ ಕೈಯಲ್ಲಿ ಅವರು ಷೂ...

Mainashree
Updated On : 7 May 2013, 1:49 am

ಬೆಂಗಳೂರು:  ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ವಿಷ್ಣುವಿನ ರೂಪದಲ್ಲಿ ವಿನ್ಯಾಸಗೊಳಿಸಿ ಕೈಯಲ್ಲಿ ಅವರು ರಾಯಭಾರಿಯಾಗಿರುವ ರಿಬಾಕ್ ಷೂ ಸೇರಿದಂತೆ ಇತರ ವಸ್ತುಗಳನ್ನು ಹಿಡಿದಿರುವ ಚಿತ್ರವನ್ನು ಪ್ರಕಟಿಸಿರುವ ಆಂಗ್ಲ ಪತ್ರಿಕೆ ಹಾಗೂ ಧೋನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರ್ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್, ಭಾರತ ತಂಡದ ನಾಯಕನನ್ನು ಹಿಂದುಗಳ ಆರಾಧ್ಯದೈವ ವಿಷ್ಣುವಿನ ರೂಪದಲ್ಲಿ ಚಿತ್ರಿಸಿದ್ದು, ಜನರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಅಲ್ಲದೆ, ವಿಷ್ಣುವಿನ ರೂಪದಲ್ಲಿರುವ ಧೋನಿಯ ಆರು ಕೈಗಳಲ್ಲಿ ಅವರು ರಾಯಭಾರಿಯಾಗಿರುವ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಅದರಲ್ಲಿ ರಿಬಾಕ್ ಷೂ ಕೂಡ ಒಂದಾಗಿದ್ದು, ವಿಷ್ಣು ಕೈಯಲ್ಲಿ ಷೂ ಹಿಡಿದಿರುವಂತೆ ಚಿತ್ರಿಸಲಾಗಿದೆ. ಇದು ಕಾನೂನುಬಾಹಿರ ಎಂದು ಅವರು ಆರೋಪಿಸಿದರು.
ಈ ಸಂಬಂಧ ನಗರದ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಧೋನಿ ಸೇರಿದಂತೆ ಆಂಗ್ಲ ಪಾಕ್ಷಿಕ ಪತ್ರಿಕೆಯ 5 ಸಂಪಾದಕರ ವಿರುದ್ಧ ಐಪಿಸಿ 295ನೇ ಕಲಂ ಅಡಿಯಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚೂರಿಖಾನ್ ಅವರು ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದ್ದಾರೆ.
ವಿಷ್ಣುವಿನ ರೂಪದಲ್ಲಿರುವ ಧೋನಿ ಕೈಯಲ್ಲಿ ತಾನು ರಾಯಭಾರಿಯಾಗಿರುವ ಲೇಸ್ ಪ್ಯಾಕೆಟ್, ಪೆಪ್ಸಿ ಬಾಟೆಲ್, ಏರ್ಸೆಲ್ ಸಿಮ್, ಮೊಬೈಲ್, ಬೂಸ್ಟ್, ದಬೂರ್ ಗಲ್ಪ್ ಇಂಜಿನಿ ಆಯಿಲ್ ಕ್ಯಾನ್ ಹಾಗೂ ರಿಬಾಕ್ ಷೂ ಹಿಡಿದಿರುವಂತೆ ವಿನ್ಯಾಸಗೊಳಿಸಿದ ಚಿತ್ರ ಏಪ್ರಿಲ್ 2ರಂದು ಪ್ರಕಟಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement