ಐ- ಲೀಗ್ ಟ್ರೋಫಿಗೆ ಹೊಸ ರೂಪ
ನವದೆಹಲಿ: ಐ- ಲೀಗ್ ಫುಟ್ಬಾಲ್ ಪಂದ್ಯಾವಳಿಯ ಟ್ರೋಫಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಹೊಸ ವಿನ್ಯಾಸ ನೀಡಿದೆ. ಚಿನ್ನದ ಲೇಪನ ಮಾಡಿರುವ ಟ್ರೋಫಿಯ ಮೇಲ್ಭಾಗದಲ್ಲಿ ಬೆಳ್ಳಿಯ ಫುಟ್ಬಾಲ್ ಇರಿಸಲಾಗಿದೆ. ಈ ಟ್ರೋಫಿಯನ್ನು ಯೂರೋಪ್ನಲ್ಲಿ ತಯಾರಿಸಲಾಗಿದ್ದು, ಪ್ರತಿ ವರ್ಷ ಗೆದ್ದ ತಂಡಕ್ಕೆ ಈ ಟ್ರೋಫಿಯನ್ನು ಹಸ್ತಾಂತರಿಸಲಾಗುತ್ತದೆ.
'ಇದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಶ್ರೇಷ್ಠ ಪ್ರಯತ್ನವಾಗಿದೆ. ಯೂರೋಪಿಯನ್ ಲೀಗ್ ಮಾದರಿಯಲ್ಲಿ ಐ-ಲೀಗ್ ನೂತನ ವಿನ್ಯಾಸದ ಟ್ರೋಫಿಯನ್ನು ರಚಿಸಲು ಚಿಂತನೆ ನಡೆಸಿದ್ದೆವು' ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.