ಜೋಕ್ ಬಾಲ್: ಕರ್ನಾಟಕದ ಇಬ್ಬರು ಪ್ರತಿಭೆಗಳು ಆಯ್ಕೆ
ಬೆಂಗಳೂರು: ಥಾಯ್ಲೆಂಡ್ನಲ್ಲಿ ಮೇ 10 ರಿಂದ 12ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಜೋಕ್ ಬಾಲ್ ಚಾಂಪಿಯನ್ಷಿಪ್ಗಾಗಿ ತೆರಳುತ್ತಿರುವ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಾದ ಎನ್. ಮಧು ಹಾಗೂ ಎಂ.ಎಸ್. ಶಶಾಂಕ್ ಅವರು ಭಾರತೀಯ ಜೋಕ್ ಬಾಲ್ ಸಂಸ್ಥೆ ವತಿಯಿಂದ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ಪಡೆದಿರುವುದಾಗಿ ಕರ್ನಾಟಕ ರಾಜ್ಯ ಜೋಕ್ ಬಾಲ್ ಸಂಸ್ಥೆ (ಕೆಎಸ್ಟಿಬಿಎ) ಪ್ರಕಟಣೆಯಲ್ಲಿ ತಿಳಿಸಿದೆ.