ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಾವೇರಿ: ಖೋ ಖೋ ಆಯ್ಕೆ ಟ್ರಯಲ್ಸ್

Mainashree
Updated On : 6 May 2013, 10:55 am

ಹಾವೇರಿ: ಜೂನಿಯರ್ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಖೋಖೋ ತಂಡದ ಆಯ್ಕೆ ಟ್ರಯಲ್ಸ್ ಇದೇ 9ರಂದು ಬೆಳಗ್ಗೆ 9 ಗಂಟೆಗೆ ನಗರದ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಲೋಕೇಶ್ವರ ಈ ಕುರಿತು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಸೋಲನ್ನಲ್ಲಿ ಮೇ.23 ರಿಂದ 27 ವರೆಗೆ ನಡೆಯಲಿರುವ 23 ನೇ ರಾಷ್ಟ್ರೀಯ ಜೂನಿಯರ್ ಖೋಖೋ ಪಂದ್ಯಾವಳಿಗೆ ರಾಜ್ಯ ತಂಡ ಆಯ್ಕೆ ಮಾಡಲಾಗುವುದು. 18 ವರ್ಷದೊಳಗಿನ ಬಾಲಕ-ಬಾಲಕಿಯರು ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸಬಹುದಾಗಿದ್ದು ಕ್ರೀಡಾಪಟುಗಳು ಸಂಬಂಧಿಸಿದ ಜಿಲ್ಲಾ ಖೋಖೋ ಸಂಸ್ಥೆ ಹಾಗೂ ನೋಂದಾಯಿತ ಕ್ಲಬ್ಗಳ ಅನುಮತಿ ಪತ್ರವನ್ನು ಆಯ್ಕೆ ಸಂದರ್ಭದಲ್ಲಿ ಹಾಜರುಪಡಿಸುವಂತೆ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಲೋಕೇಶ್ವರ ಮೋ.9448005974, ತರಬೇತುದಾರ ಶಿವರಾಜ್ ಗಂಡೆ  9880051882 ಇವರನ್ನು ಸಂಪರ್ಕಿಸಬಹುದಾಗಿದೆ.
ತರಬೇತಿ ಶಿಬಿರ ಹಾವೇರಿ ಜಿಲ್ಲಾ ಖೋಖೋ ಸಂಸ್ಥೆ ಮತ್ತು ನ್ಯೂಕದಂಬ ಸ್ಪೋರ್ಟ್ಸ್ ಕ್ಲಬ್ ಜಂಟಿ ಸಹಯೋಗದಲ್ಲಿ ಮೇ.10 ರಿಂದ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement