ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಕ್ಸ್‌ಫ್ಯಾಕ್ಟರ್ ಕೌತುಕ

Lingaraj Badiger
Updated On : 7 May 2013, 6:15 am

ಈಗ ಕನ್ನಡ ಟೆಲಿವಿಷನ್ ಲೋಕದಲ್ಲೆಲ್ಲೂ ಬಿಗ್ ಬಾಸ್ ಹಂಗಾಮ. ಜನರೂ ಅದಕ್ಕೆ ಮರುಳಾಗಿದ್ದಾರೆ. ಅಂಥದ್ದೇ ಒಂದು ರಿಯಾಲಿಟಿ ಷೋ.. ಎಕ್ಸ್‌ಫ್ಯಾಟ್ಕರ್ ಶೀಘ್ರದಲ್ಲೇ ಆಸ್ಟ್ರೇಲಿಯಾದ ವಾಹಿನಿಯೊಂದರಲ್ಲಿ ಪುನರಾರಂಭಗೊಳ್ಳುತ್ತಿದೆ. ಇದರಲ್ಲಿ, ಎಫ್ 1 ಆಟಗಾರ ಲಿವೀಸ್ ಹ್ಯಾಮಿಲ್ಟನ್ ಪ್ರೇಯಸಿ ನಿಕೋಲೆ ಶಿವೆಂಜರ್ ಕೂಡಾ ಭಾಗವಹಿಸುತ್ತಿದ್ದಾಳಂತೆ. ಇದರಲ್ಲಿ, ಮತ್ತೊಬ್ಬ ಖ್ಯಾತ ಮಾಡೆಲ್ ಲ್ರಿಲಾನ್ ಕ್ಲಾರ್ಕ್ ಕೂಡಾ ಭಾಗವಹಿಸುತ್ತಿದ್ದಾಳೆ. ಆದರೆ, ವಿಶೇಷ ಏನಪ್ಪಾ ಅಂದ್ರೆ... ಈ ಮೊದಲು ಶುರುವಾಗಿದ್ದ ಎಕ್ಸ್‌ಫ್ಯಾಕ್ಟರ್ ಕಂತುಗಳಲ್ಲೂ ಸುಮಾರು 10 ಜನರ ಜೊತೆ ಈ ಇಬ್ಬರೂ ಇದ್ದರು. ಆಗೆಲ್ಲಾ, ಸಖತ್ ಪೈಪೋಟಿ ನಡೆಸುತ್ತಾ ಒಬ್ಬರ ಮೇಲೊಬ್ಬರು ಜಗಳ ಕಾದಿದ್ದರಂತೆ. ಅದು ಆ ಕಾರ್ಯಕ್ರಮದ ಜನಪ್ರಿಯತೆಗೂ ಕಾರಣವಾಗಿತ್ತಂತೆ. ಹಾಗಾಗಿ, ಇದೀಗ ಮತ್ತೆ ಅದೇ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭಾಗವಹಿಸಲು ಈ ಇಬ್ಬರೂ ಜಗಳಗಂಟಿಯರಿಗೆ ಆಹ್ವಾನ ನೀಡಲಾಗಿದೆ. ಈ ಬಾರಿ ಏನಾಗುತ್ತೋ ಅಂತ ನೋಡಲು ಜನರೂ ಕಾತುರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement