ತವರಿನಲ್ಲಿ ರಾಜಸ್ಥಾನ ಅಜೇಯ
ಆಕರ್ಷಕ ಅರ್ಧ ಶತಕ ಸಿಡಿಸಿದ ರಾಹುಲ್ ದ್ರಾವಿಡ್ (53) ಮತ್ತು ಅಜಿಂಕ್ಯ ರಹಾನೆ (ಅಜೇಯ 63) ರಾಜಸ್ಥಾನ ರಾಯಲ್ಸ್ ತಂಡಕ್ಕೆ...
ಜೈಪುರ: ಆಕರ್ಷಕ ಅರ್ಧ ಶತಕ ಸಿಡಿಸಿದ ರಾಹುಲ್ ದ್ರಾವಿಡ್ (53) ಮತ್ತು ಅಜಿಂಕ್ಯ ರಹಾನೆ (ಅಜೇಯ 63) ರಾಜಸ್ಥಾನ ರಾಯಲ್ಸ್ ತಂಡಕ್ಕೆ 9 ವಿಕೆಟ್ ಅಂತರದಿಂದ ಜಯ ತಂದುಕೊಟ್ಟರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್ಡೆವಿಲ್ಸ್ ತಂಡ ನಿಗದಿತ ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಕೇವಲ 1 ವಿಕೆಟ್ ನಷ್ಟಕ್ಕೆ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 155 ರನ್ ಪೇರಿಸಿ ಜಯದ ಸಂಭ್ರಮ ಆಚರಿಸಿತು.
ದ್ರಾವಿಡ್ ಮತ್ತು ರಹಾನೆ ಜತೆಯಾಟದಲ್ಲಿ ಮೊದಲ ವಿಕೆಟ್ಗೆ 108 ರನ್ ಕಲೆ ಹಾಕಿದರು. 45 ಎಸೆತಗಳನ್ನು ಎದುರಿಸಿದ ರಹಾನೆ ಮೊತ್ತದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. 48 ಎಸೆತಗಳನ್ನು ಎದುರಿಸಿದ ದ್ರಾವಿಡ್ ಮೊತ್ತದಲ್ಲಿ 7 ಬೌಂಡರಿಗಳು ಸೇರಿದ್ದವು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಂತೆಯೇ ಸಿದ್ದಾರ್ಥ್ ಕೌಲ್ ಬೌಲಿಂಗ್ನಲ್ಲಿ ಅಜಿತ್ ಅಗರ್ಕರ್ಗೆ ಕ್ಯಾಚ್ ನೀಡಿದರು.
ದ್ರಾವಿಡ್ ನಂತರ ಬಂದ ಶೇನ್ ವ್ಯಾಟ್ಸನ್ 14 ಎಸೆತಗಳಲ್ಲಿ 28 ರನ್ ಗಳಿಸಿ ಅಜೇಯರಾಗುಳಿದರು. ರಹಾನೆ ಮತ್ತು ವ್ಯಾಟ್ಸನ್ ಮುರಿಯದ ಜತೆಯಾಟದಲ್ಲಿ 46 ರನ್ ಕಲೆ ಹಾಕುವ ಮೂಲಕ ತಂಡವನ್ನು ಜಯದ ದಡ ಸೇರಿಸಿದರು.
ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಆಡಿದ 12 ಪಂದ್ಯಗಳಲ್ಲಿ 8ರಲ್ಲಿ ಜಯ ಕಾಣುವ ಮೂಲಕ 16 ಅಂಕಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದು, ಸೆಮಿಫೈನಲ್ ಪ್ರವೇಶಿಸುವ ಕಾತರದಲ್ಲಿದೆ.
ಈಗಾಗಲೇ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಕಳೆದುಕೊಂಡಿದ್ದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಈ ಪಂದ್ಯದಲ್ಲೂ ಸೋಲುವ ಮೂಲಕ, ಆಡಿರುವ 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಡೆಲ್ಲಿ ತಂಡದ ಪರ ಸಿದ್ದಾರ್ಥ್ ಕೌಲ್ ಮಾತ್ರ ಒಂದು ವಿಕೆಟ್ ಪಡೆದರು. ಇತರ ಬೌಲರ್ಗಳು ಮಿಂಚುವಲ್ಲಿ ವೈಫಲ್ಯ ಕಂಡರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ರೊಹ್ರರ್ (63) ಅರ್ಧ ಶತಕದ ನೆರವಿನೊಂದಿಗೆ 4 ವಿಕೆಟ್ ನಷ್ಟಕ್ಕೆ 154 ರನ್ ಕಲೆ ಹಾಕಿತ್ತು. ಮಹೇಲ ಜಯವರ್ಧನೆ (34) ಮ್ತತು ಕೇದಾರ ಜಾಧವ್ (23) ಡೆಲ್ಲಿ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇತರ ಬ್ಯಾಟ್ಸ್ಮನ್ಗಳಾಗಿದ್ದಾರೆ.
ರಾಜಸ್ಥಾನದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯರಾಗುಳಿದ ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ಡೆಲ್ಲಿ: 154/4 (20 ಓವರ್)
ಜಯವರ್ಧನೆ ಸಿ ದ್ರಾವಿಡ್ ಬಿ ತ್ರಿವೇದಿ 34 (31), ವೀರೇಂದ್ರ ಸೆಹ್ವಾಗ್ ಬೌಲ್ಡ್ ಬಿ ಫಾಕ್ನರ್ 11 (7), ಸಿ.ಎಂ. ಗೌತಮ್ ಸಿ ಸ್ಯಾಮನ್ಸ್ ಬಿ ವ್ಯಾಟ್ಸನ್ 2 (3), ಡೇವಿಡ್ ವಾರ್ನರ್ ಸಿ ಸಚಿನ್ ಬೇಬಿ ಬಿ ಸ್ಟುವರ್ಟ್ ಬಿನ್ನಿ 13 (18), ಬೆನ್ ರೊಹ್ರರ್ ಅಜೇಯ 64 (40), ಕೆ.ಎಂ. ಜಾಧವ್ ಅಜೇಯ 23 (21). ಇತರೆ 7.
ವಿಕೆಟ್ ಪತನ: 1-19, 2-22, 3-47, 4-78.
ಬೌಲಿಂಗ್: ಶಾನ್ ಟೈಟ್ 3-0-39-0, ಫಾಕ್ನರ್ 4-0-38-1, ಶೇನ್ ವ್ಯಾಟ್ಸನ್ 3-0-21-1, ಸ್ಟುವರ್ಟ್ ಬಿನ್ನಿ 2-0-3-1, ಪ್ರವೀಣ್ ಟ್ಯಾಂಬೆ 4-0-30-0, ತ್ರಿವೇದಿ 4-0-21-1.
ರಾಜಸ್ಥಾನ ರಾಯಲ್ಸ್: 155/1 (17.5 ಓವರ್)ರಾಹುಲ್ ದ್ರಾವಿಡ್ ಸಿ ಅಗರ್ಕರ್ ಬಿ ಸಿದ್ಧಾರ್ಥ್ ಕೌಲ್ 53 (48), ರಹಾನೆ ಅಜೇಯ 63 (45), ವ್ಯಾಟ್ಸನ್ ಅಜೇಯ 28 (14). ಇತರೆ 11.
ವಿಕೆಟ್ ಪತನ: 1-108.
ಬೌಲಿಂಗ್: ಸಿದ್ಧಾಥ್ ಕೌಲ್ 3.5-1-23-1, ಉಮೇಶ್ ಯಾದವ್ 3-0-28-0, ಮಾರ್ನೆ ಮಾರ್ಕೆಲ್ 4-0-40-0, ಅಗರ್ಕರ್ 2-0-22-0, ಪವನ್ ನೇಗಿ 4-0-28-0, ರೊಹ್ರರ್ 1-0-12-0.