ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈಡರ್ಸ್‌ಗೆ ಸ್ಪರ್ಧಾತ್ಮಕ ಸವಾಲು

Mainashree
Updated On : 7 May 2013, 10:58 am

ಮುಂಬೈ: ಆರಂಭಿಕ ಆಟಗಾರರಾದ ಡ್ವೆನ್ ಸ್ಮಿತ್ (47) ತಾಳ್ಮೆಯ ಬ್ಯಾಟಿಂಗ್ ಮತ್ತು ಸಚಿನ್ ತೆಂಡೂಲ್ಕರ್ (48) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಮುಂಬೈ ತಂಡ ಕೋಲ್ಕತಾಕ್ಕೆ 171 ರನ್‌ಗಳ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆ ಹಾಕಿತು.
28 ಎಸೆತಗಳನ್ನು ಎದುರಿಸಿದ ಸಚಿನ್ ಮೊತ್ತದಲ್ಲಿ 8 ಬೌಂಡರಿಗಳು ಸೇರಿದ್ದವು. ಸಚಿನ್ ಇನ್ನೇನು ಶತಕ ಪೂರೈಸಲಿದ್ದಾರೆ ಎನ್ನುವಾಗಲೇ 13ನೇ ಓವರ್‌ನಲ್ಲಿ ರಜತ್ ಭಾಟಿಯಾ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿ ತವರಿನ ಅಂಗಣದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಇನ್ನು ಸಚಿನ್ ಜತೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮಿತ್ ಮೊತ್ತದಲ್ಲಿ 7 ಬೌಂಡರಿಗಳು ಸೇರಿದ್ದವು. ಸ್ಮಿತ್ 14ನೇ ಓವರ್‌ನಲ್ಲಿ ಇಕ್ಬಾಲ್ ಅಬ್ದುಲ್ಲಾ ಎಸೆತದಲ್ಲಿ ಮೆಕಲಾರೆನ್‌ಗೆ ಕ್ಯಾಚ್ ನೀಡಿದರು. ಇಬ್ಬರ ಜತೆಯಾಟದಲ್ಲಿ ಮೊದಲ ವಿಕೆಟ್‌ಗೆ 93 ರನ್ ಕಲೆ ಹಾಕಿದ್ದರು. ಹೀಗಾಗಿ ಮುಂಬೈ ತವರಿನ ಅಂಗಣದಲ್ಲಿ ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಕೋಲ್ಕತಾ ಬೌಲರ್‌ಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವಿಫಲವಾದರು.
ಆದರೆ, ಮೂರನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 34 ರನ್ ಕಲೆ ಹಾಕಿದ್ದು ತಂಡ 160 ಗಡಿ ದಾಟಲು ನೆರವಾಯಿತು. ದಿನೇಶ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು.
17ನೇ ಓವರ್ ಒಂದರಲ್ಲೇ ಮುಂಬೈ ಮೂರು ವಿಕೆಟ್ ಉರುಳಿದ್ದು ಮುಂಬೈ ಬೃಹತ್ ಮೊತ್ತದ ಕನಸಿಗೆ ಅಡ್ಡಿಯಾಯಿತು. ರೆಯಾನ್ ಮೆಕಲಾರೆನ್ ಎಸೆದ ಓವರ್‌ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ (16) ಅವರು ಇಯಾನ್ ಮಾರ್ಗನ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಕೀರನ್ ಪೊಲಾರ್ಡ್ (4) ಮತ್ತು ಅಂಬಟಿ ರಾಯುಡು (0) ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.
ಕೋಲ್ಕತಾ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಮೆಕಲಾರೆನ್ 2 ವಿಕೆಟ್ ಕಬಳಿಸಿದರೆ, ಇಕ್ಬಾಲ್ ಅಬ್ದುಲ್ಲಾ ಮತ್ತು ರಜತ್ ಭಾಟಿಯಾ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್: 170/6 (20 ಓವರ್)
ಡ್ವೈನ್ ಸ್ಮಿತ್ ಸಿ ಮೆಕ್‌ಲಾರೆನ್ ಬಿ ಇಕ್ಬಾಲ್ 47 (53), ಸಚಿನ್ ತೆಂಡೂಲ್ಕರ್ ಬೌಲ್ಡ್ ಭಾಟಿಯಾ 48 (28), ದಿನೇಶ್ ಕಾರ್ತಿಕ್ ಅಜೇಯ 34 (18), ರೋಹಿತ್ ಶರ್ಮಾ  ಸಿ ಮಾರ್ಗನ್ ಬಿ ಮೆಕ್‌ಲಾರೆನ್ 16 (11), ಪೊಲ್ಲಾರ್ಡ್ ಸಿ ನಾರಾಯಣ್ ಬಿ ಮೆಕ್‌ಲಾರೆನ್ 4 (4), ಅಂಬಟಿ ರಾಯುಡು ರನೌಟ್ (ಬಾಲಾಜಿ/ಬಿಸ್ಲಾ) 0 (0), ಹರ್ಭಜನ್ ಸಿಂಗ್ ರನೌಟ್ (ಪಠಾಣ್) 0 (0), ಜಾನ್ಸನ್ ಅಜೇಯ 10 (6). ಇತರೆ 5.
ವಿಕೆಟ್ ಪತನ: 1-93, 2-99, 3-130, 4-134, 5-135, 6-144.
ಬೌಲಿಂಗ್: ಬಾಲಾಜಿ 3-1-7-0, ಮೆಕ್‌ಲಾರೆನ್ 4-0-60-2, ಸುನಿಲ್ ನಾರಾಯಣ್ 4-0-29-0, ಜಾಕ್ ಕಾಲಿಸ್ 3-0-21-0, ಇಕ್ಬಾಲ್ ಅಬ್ದುಲ್ಲಾ 4-0-30-1, ಭಾಟಿಯಾ 2-0-22-1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement