ಸನ್‌ಗೆ ಸವಾಲಿನ ಮೊತ್ತ
ಹೈದರಾಬಾದ್: ಸುರೇಶ್ ರೈನಾ (ಅಜೇಯ 99) ಮತ್ತು ಮೈಕಲ್ ಹಸ್ಸಿ (67) ಅವರ ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 224 ರನ್‌ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಆರಂಭವಾಗಿರಲಿಲ್ಲ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ವಿಕೆಟ್ ಕಳೆದುಕೊಂಡು 223 ರನ್ ಕಲೆ ಹಾಕಿತು.
ಆರಂಭದಲ್ಲಿ ಅಬ್ಬರಿಸಿದ ಮುರಳಿ ವಿಜಯ್ (29) ಸ್ಫೋಟಕ ಹೊಡೆತಕ್ಕೆ ಮುಂದಾಗಿ ಪೆರೇರಾ ಬೌಲಿಂಗ್‌ನಲ್ಲಿ ಪಾರ್ಥೀವ್ ಪಟೇಲ್‌ಗೆ ಕ್ಯಾಚ್ ನೀಡಿ ಹೊರನಡೆದರು.
ಪಟೇಲ್ ನಂತರ ಬಂದ ಸುರೇಶ್ ರೈನಾ ಮೈಕಲ್ ಹಸ್ಸಿಗೆ ತಕ್ಕ ಸಾಥ್ ನೀಡುವ ಮೂಲಕ ಇಬ್ಬರ ಮುರಿಯದ ಜತೆಯಾಟದಲ್ಲಿ 2ನೇ ವಿಕೆಟ್‌ಗೆ 133 ರನ್ ಸೇರಿಸಿದರು. ಇದು ತಂಡದ ಮೊತ್ತ 220 ರನ್‌ಗಳ ಗಡಿ ದಾಟಲು ನೆರವಾಯಿತು.
42 ಎಸೆತಗಳನ್ನು ಎದುರಿಸಿದ ಮೈಕಲ್ ಹಸ್ಸಿ ಮೊತ್ತದಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಇನ್ನು 52 ಎಸೆತಗಳನ್ನು ಎದುರಿಸಿದ ರೈನಾ ಮೊತ್ತದಲ್ಲಿ 3 ಸಿಕ್ಸರ್ ಮತ್ತು 11 ಬೌಂಡರಿಗಳು ಸೇರಿದ್ದವು. ಕೂದಲೆಳೆಯಲ್ಲಿ ರೈನಾ ಶತಕದಿಂದ ವಂಚಿತರಾದರು. ಈ ಆವೃತ್ತಿಯಲ್ಲಿ 400 ರನ್ ಪೂರೈಸಿದ ಸುರೇಶ್ ರೈನಾ ಆರೂ ಐಪಿಎಲ್ ಆವೃತ್ತಿಗಳಲ್ಲಿ 400 ಪೂರೈಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಸಿಎಸ್‌ಕೆ: 223/3 (20 ಓವರ್)
ರೈನಾ ಅಜೇಯ 99 (52), ಹಸ್ಸಿ 67 (42)
ಬೌಲಿಂಗ್: ಪೆರೇರಾ 45/3, ಸ್ಟೇಯ್ನ್ 17/0