ಹಾಕಿ: ಹಾಲೆಂಡ್ ವಿರುದ್ಧ ಭಾರತಕ್ಕೆ ಜಯ
ನವದೆಹಲಿ: ವಿಶ್ವ ಹಾಕಿ ಲೀಗ್ ಹಿನ್ನೆಲೆಯಲ್ಲಿ ತಯಾರಿಗಾಗಿ ನಡೆಯುತ್ತಿರುವ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ, ನೆದರ್ಲ್ಯಾಂಡ್ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.
ಚಿಂಗ್ಲೆಂಸನಾ ಅವರು ಪಂದ್ಯದ 10ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಭಾರತ ತಂಡ ತಮ್ಮ ಗೋಲುಗಳ ಖಾತೆಯನ್ನು ತೆರೆಯಿತು. ನಂತರ ಮನ್ಪ್ರೀತ್ ಸಿಂಗ್ 20ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಎರಡನೇ ಅವಧಿಯಲ್ಲಿ ಭಾರತದ ಪರ ಎಸ್.ವಿ ಸುನಿಲ್ 52ನೇ ಹಾಗೂ ನಿತೀನ್ ತಿಮ್ಮಯ್ಯ 66ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿತ್ತು.