'ಗೇಯ್ಲ್ ವಿಕೆಟ್ ಅಸಾಧ್ಯವೇನಲ್ಲ'
ನವದೆಹಲಿ: ಕ್ರಿಸ್ ಗೇಯ್ಲ್ ಸಹ ಬ್ಯಾಟಿಂಗ್ನಲ್ಲಿ ತಪ್ಪೆಸಬಹುದು. ಅವರ ವಿಕೆಟ್ ಪಡೆಯುವುದ ಅಸಾಧ್ಯವೇನಲ್ಲ ಎಂದು ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪ್ರತಿಭಾನ್ವಿತ ಬೌಲರ್ ಸಿದ್ದಾರ್ಥ್ ಕೌಲ್ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಐಪಿಎಲ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಈ ರೀತಿ ಹೇಳಿದ್ದಾರೆ. 'ಗೇಯ್ಲ್ ಸಹ ಮಾನವ ಸಹಜ ಗುಣಗಳನ್ನು ಹೊಂದಿದ್ದಾರೆ. ಸಮರ್ಥವಾಗಿ ಬೌಲಿಂಗ್ ಪ್ರದರ್ಶಿಸಿದರೆ, ಅವರ ವಿಕೆಟ್ ಪಡೆಯುವುದು ದೊಡ್ಡ ಮಾತೇನಲ್ಲ' ಎಂದರು.