ಚೆಸ್: ಆನಂದ್ಗೆ ಡ್ರಾ
ಸ್ಯಾಂಡ್ನೆಸ್(ನಾರ್ವೆ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಸೂಪರ್ 2013 ಪಂದ್ಯಾವಳಿಯಲ್ಲಿ ನಿಧಾನಗತಿಯ ಆರಂಭ ಪಡೆದಿದ್ದು, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. ಎಮಂನಿಯಾದ ಪ್ರಮುಖ ಆಟಗಾರ ಲೆವೊನ್ ಅರೋನಿಯನ್ ವಿರುದ್ಧ ಸೆಣೆಸಾಡಿದ ಆನಂದ್, ಸುಲಭ ಜಯಾ ಸಾಧಿಸಿದ್ದಾರೆ. ಉನ್ನತ ರ್ಯಾಂಕಿಂಗ್ ಪಡೆದಿರುವ ಎದುರಾಳಿಗಳ ವಿರುದ್ಧ ಬಿಳಿಕಾಯಿ ಹಾಗೂ ಕಡಿಮೆ ರ್ಯಾಂಕಿಂಗ್ ಪಡೆದಿರುವ ಆಟಗಾರರ ವಿರುದ್ಧ ಕಪ್ಪುಕಾಯಿಗಳನ್ನು ಬಳಸುವ ಆನಂದ್ ಅವರ ತಂತ್ರಗಾರಿಕೆ ಫಲ ನೀಡಿದ್ದು, ಅರೋನಿಯನ್ ವಿರುದ್ಧ ಸುಲಭ ಡ್ರಾ ಸಾಧಿಸಿದ್ದಾರೆ. ಇನ್ನು ಆನಂದ್ ತಮ್ಮ ಎರಡನೇ ಸುತ್ತಿನಲ್ಲಿ ನಾರ್ವೆಯ ಪ್ರಮುಖ ಆಟಗಾರ ಮ್ಯಾಗ್ನಸ್ ಕಾರ್ಲ್ಸೇನ್ ವಿರುದ್ಧ ಆಡಲಿದ್ದು, ಈ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ.