ತವರಿಗೆ ಮರಳಿದ ಗಾಯಾಳು ಸ್ಮಿತ್
ಪುಣೆ: ಆಸ್ಟ್ರೇಲಿಯಾದ ಆಲ್ರೌಂಡರ್ ಸ್ಟೀವನ್ ಸ್ಮಿತ್ ಗಾಯದ ಸಮಸ್ಯೆಗೆ ಸಿಲುಕಿರುವ ಹಿನ್ನಲೆಯಲ್ಲಿ ಐಪಿಎಲ್ನ ಪುಣೆ ವಾರಿಯರ್ಸ್ ಪರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಬೆನ್ನಿನ ನೋವಿಗೆ ಸಿಲುಕಿರುವ ಸ್ಮಿತ್ ಚಿಕಿತ್ಸೆಗಾಗಿ ತವರಿಗೆ ಮರಳಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಗಾಯದ ಸಮಸ್ಯೆಯಿಂದಾಗಿ ಸ್ಮಿತ್ ಅವರನ್ನು ಪುಣೆ ವಾರಿಯರ್ಸ್ ತಂಡ ಐಪಿಎಲ್ನಿಂದ ಬಿಡುಗಡೆ ಮಾಡಿದ್ದು, ಚಿಕಿತ್ಸೆಗಾಗಿ ಅವರು ತವರಿಗೆ ಮರಳಲಿದ್ದಾರೆ ಎಂದು ತಿಳಿಸಿದೆ.