ದಿವಿಜ್- ಪುರವ ಜೋಡಿ ಸೆಮೀಸ್ಗೆ
ಕನ್ಮಿಂಗ್: ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ಇಲ್ಲಿ ನಡೆಯುತ್ತಿರುವ ಚೀನಾ ಎಟಿಪಿ ಚಾಲೆಂಜರ್ಸ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದೆ.
ಮೂರನೇ ಶ್ರೇಯಾಂಕ ಪಡೆದಿರುವ ಭಾರತ ಜೋಡಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ ನಂತರ, ವಾಕ್ ಓವರ್ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ದಿವಿಜ್- ಪುರವ ಜೋಡಿ, ತೈಪೇಯ ಸೀನ್-ಯಿನ್ ಪೆಂಗ್ ಜೋಡಿ ವಿರುದ್ಧ 4-6, 6-3, 10-7 ಪ್ರಯಾಸದ ಜಯ ಸಾಧಿಸಿತು. ಮೊದಲ ಸೆಟ್ನಲ್ಲಿ ಸೋಲನುಭವಿಸಿದ ಭಾರತದ ಜೋಡಿ, ಎರಡನೇ ಸೆಟ್ನಲ್ಲಿ ಸುಲಭವಾಗಿ ಜಯ ಕಂಡುಕೊಂಡಿತು. ನಂತರ ಟೈಬ್ರೇಕರ್ಗೆ ಜಾರಿದ ನಿರ್ಣಾಯಕ ಮತ್ತು ಮೂರನೇ ಸೆಟ್ನಲ್ಲಿ ಜಯ ಕಂಡುಕೊಳ್ಳುವಲ್ಲಿ ಭಾರತ ಜೋಡಿ ಯಶಸ್ವಿಯಾಯಿತು. ಭಾರತದ ಜೋಡಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ನ ಮಾಕ್ರೋ ಚ್ಯೂಡಿನೆಲ್ಲಿ ಮತ್ತು ಜಪಾನ್ನ ತಾಸುಮಾ ಇಟೋ ಜೋಡಿಯನ್ನು ಎದುರಿಸಬೇಕಿತ್ತು. ಆದರೆ, ಗಾಯದಿಂದ ಹಿಂದೆ ಸರಿದ ಕಾರಣ ಭಾರತದ ಜೋಡಿ ಸೆಮಿಫೈನಲ್ ಪ್ರವೇಶಿಸಿತು.