ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ಲೇ ಆಫ್ ಸನಿಹ ರಾಯಲ್ಸ್

Mainashree
Updated On : 10 May 2013, 12:37 pm

ಪಂಜಾಬ್: ರಾಯಲ್ ಚಾಲೆಂಜರ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಪ್ಲೇ ಆಫ್ ಕನಸು ಕಾಣುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಸೋಲನುಭವಿಸಿದೆ.
ತವರಿನಲ್ಲಿ ನಡೆದೆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲವಿನ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 147 ರನ್ ಸೇರಿಸಿ ಗೆಲವಿನ ನಗೆ ಬೀರಿತು.
ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಮಂದೀಪ್ ಸಿಂಗ್(0) ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಜತೆಯಾದ ನಾಯಕ ಗಿಲ್‌ಕ್ರಿಸ್ಟ್ (42) ಹಾಗೂ ಶಾನ್ ಮಾರ್ಷ್ (77) ತಂಡಕ್ಕೆ 101 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ರನ್‌ಗತಿಯನ್ನು ಮೇಲೆತ್ತಿದರು.
ಕೂಪರ್ ಎಸೆತದಲ್ಲಿ ಗಿಲ್‌ಕ್ರಿಸ್ಟ್ ಔಟಾಗುವ ಮೂಲಕ ಈ ಜೋಡಿ ಮುರಿದು ಬಿತ್ತು. ನಂತರ ಬಂದ ಡೇವಿಡ್ ಹಸ್ಸಿ (1) ವ್ಯಾಟ್ಸನ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್‌ಗಳಲ್ಲಿ ಕಿಂಗ್ಸ್ ನಿರಂತರವಾಗಿ ವಿಕೆಟ್ ಕಳೆದುಕೊಂಡು ರನ್‌ಗತಿ ಹೆಚ್ಚಿಸುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕಗಳಿಸಿದ್ದ ಡೇವಿಡ್ ಮಿಲ್ಲರ್ ಕೇವಲ 8 ರನ್‌ಗಳಿಸಿದರು. ಉಳಿದಂತೆ ಗೋನಿ (3), ಸತೀಶ್ (ಅಜೇಯ 4), ಚಾವ್ಲಾ (ಅಜೇಯ 1) ಎರಡಂಕಿ ತಲುಪುವಲ್ಲಿ ವಿಫಲರಾದರು.   ರಾಜಸ್ಥಾನ ಪರ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದ ಕೆವಿನ್ ಕೂಪರ್ ಯಶಸ್ವಿ ಬೌಲರ್ ಎನಿಸಿದರು.
ಕಿಂಗ್ಸ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಜಯದ ದಡ ಸೇರಿತು. ಆರಂಭಿಕರಾಗಿ ಕಣಕ್ಕಿಳಿದ ದ್ರಾವಿಡ್ ಕೇವಲ 4ರನ್‌ಗಳಿಸಿ ಔಟಾದರು ನಂತರ ಬಂದ ವ್ಯಾಟ್ಸನ್ (31), ರಹಾನೆ ಜತೆ ಸೇರಿ 66 ರನ್‌ಗಳ ಜತೆಯಾಟ ನೀಡಿದರು. ವ್ಯಾಟ್ಸನ್ ನಂತರ ಬಂದ ಸ್ಯಾಮ್ಸನ್ (ಅಜೇಯ 47), ರಹಾನೆ (ಅಜೇಯ 59) ಜತೆಗೂಡಿ 3ನೇ ವಿಕೆಟ್‌ಗೆ ಮುರಿಯದ 76 ರನ್‌ಗಳ ಜತೆಯಾಟ ನೀಡುವ ಮೂಲಕ ಗೆಲವಿನ ನಗೆ ಬೀರಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಾರಕ ಬೌಲಿಂಗ್‌ನಿಂದ ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಕಾರಣರಾದ ಕೂಪರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಜಯದ ಮೂಲಕ ರಾಜಸ್ಥಾನ ತಂಡ 9 ಜಯದೊಂದಿಗೆ 18 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಅಲ್ಲದೆ ಪ್ಲೇ ಆಫ್ ಸುತ್ತಿನ ವಸ್ತಿಲಿಗೆ ಬಂದಿದ್ದು, ತಮ್ಮ ಹಾದಿ ಮತ್ತಷ್ಟು ಸುಗಮವಾಗಿದೆ.

ಸ್ಕೋರ್ ಬೋರ್ಡ್
ಪಂಜಾಬೆ: 145/6 (20 ಓವರ್)
ಮಂದೀಪ್ ಸಿ ಮತ್ತು ಬಿ ಚಾಂಡಿಲಾ 0(3), ಗಿಲ್‌ಕ್ರಿಸ್ಟ್ ಸಿ ಮತ್ತು ಬಿ ಕೂಪರ್ 42(32), ಮಾರ್ಷ್ ಬಿ ಕೂಪರ್ 77(64), ಹಸ್ಸಿ ಬಿ ವ್ಯಾಟ್ಸನ್ 1(3), ಮಿಲ್ಲರ್ ಸಿ ರಹಾನೆ ಬಿ 8(11), ಗೋನಿ ಸಿ ಸ್ಯಾಮ್ಸನ್ ಬಿ ಫಾಕ್ನರ್ 3(3), ಸತೀಶ್ ಅಜೇಯ 4(3), ಚಾವ್ಲಾ ಅಜೇಯ 1(1), ಇತರೆ 9.
ವಿಕೆಟ್ ಪತನ: 1-0, 2-102, 3-105, 4-136, 5-137, 6-143ಬೌಲಿಂಗ್: ಚಂಡಿಲಾ 4-0-24-1, ಶ್ರೀಶಾಂತ್ 2-0-18-0, ಫಾಕ್ನರ್ 4-0-37-1, ವ್ಯಾಟ್ಸನ್ 4-0-19-1, ತ್ರಿವೇದಿ 2-0-18-0, ಕೂಪರ್ 4-0-23-3


ರಾಜಸ್ಥಾನ 147/2 (19 ಓವರ್)
ದ್ರಾವಿಡ್ ಬಿ ಬಿಪುಲ್ 4(7), ರಹಾನೆ ಅಜೇಯ 59(49), ವ್ಯಾಟ್ಸನ್ ಬಿ ಚಾವ್ಲಾ 31(25), ಸ್ಯಾಮ್ಸನ್ ಅಜೇಯ 47(33), ಇತರೆ 6
ವಿಕೆಟ್ ಪತನ: 1-5, 2-71ಬೌಲಿಂಗ್: ಪ್ರವೀಣ್ 4-0-27-0, ಬಿಪುಲ್ 4-0-21-1, ಅವಾನ 4-0-39-0, ಚಾವ್ಲಾ 4-0-27-1, ಗೋನಿ 2-0-22-0, ಸತೀಶ್ 1-0-10-0

ಪಂದ್ಯ ಶ್ರೇಷ್ಠ:
    ಕೆವಿನ್ ಕೂಪರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement