ಮಹೇಶ್ ಕ್ವಾರ್ಟರ್ಗೆ
ಮುಂಬೈ: ನಗರದಲ್ಲಿ ಸ್ಕ್ವಾಷ್ ಚಾಲೆಂಜರ್ನಲ್ಲಿ ಭಾರತದ ಮಹೇಶ್ ಮಂಗಾವ್ಕರ್ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಆರಂಭಿಕ ಸುತ್ತಿನಲ್ಲಿ ಜೋರ್ಡಾನಿಯನ್ ಅಹ್ಮದ್ ಅಲ್ ಸರಜ್ ಅವರನ್ನು 11-3, 11-6, 11-4 ಸೆಟ್ಗಳಿಂದ ಸೋಲಿಸಿದ 19 ವರ್ಷದ ಮಂಗಾವ್ಕರ್ ಕ್ವಾರ್ಟರ್ಫೈನಲ್ಗೆ ಹೆಜ್ಜೆ ಹಾಕಿದರು. 'ಆರಂಭಿಕ ಸುತ್ತಿನಲ್ಲಿ ಜಯ ಸಾಧಿಸಿರುವುದು ನನಗೆ ಖುಷಿ ನೀಡಿದೆ. ಪಂದ್ಯದಲ್ಲಿ ನಾನು ಸಮರ್ಥ ಹೋರಾಟ ನೀಡಿದೆ. ಶುಕ್ರವಾರದ ಪಂದ್ಯದಲ್ಲಿ ವಿಶ್ವದ 30ನೇ ರ್ಯಾಂಕಿಂಗ್ ಆಟಗಾರ ಮೊಹ್ಮದ್ ಅಲಿಯನ್ನು ಎದುರಿಸಲಿದ್ದೇನೆ. ತವರಿನ ಅಂಗಣದಲ್ಲಿ ಅಂತಹ ಆಟಗಾರನ ವಿರುದ್ಧ ಹೋರಾಟಕ್ಕೆ ಅವಕಾಶ ಸಿಕ್ಕಿರುವುದು ಅತೀವ ಸಂತಸವಾಗುತ್ತಿದೆ' ಎಂದಿದ್ದಾರೆ ಮಹೇಶ್.