ವಾರಿಯರ್ಸ್ಗೆ ಸ್ಪರ್ಧಾತ್ಮಕ ಗುರಿ
ಪುಣೆ: ನಾಯಕ ಗೌತಮ್ ಗಂಭಿರ್ ಅವರ ಅರ್ಧಶತಕ ಹಾಗೂ ರಾಯನ್ ಡಸ್ಕೆಟ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನೊಂದಿಗೆ ಕೆಕೆಆರ್ ತಂಡ ಪುಣೆ ವಾರಿಯರ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ರೈಡರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ಗಳಿಸಿತು.
ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಪುಣೆ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಕೆಕೆಆರ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಹಾಗೂ ಮನ್ವಿಂದರ್ ಬಿಸ್ಲಾ ತಂಡಕ್ಕೆ ಸಾಧಾರಣ ಆರಂಭ ನಿಡಿತು. ಈ ಜೋಡಿ ಮೊದಲ ವಿಕೆಟ್ಗೆ 45 ರನ್ ಪೇರಿಸಿದ ಈ ಜೋಡಿ, ಭುವನೇಶ್ವರ್ ಎಸೆತದಲ್ಲಿ ಬಿಸ್ಲಾ ಔಟಾಗುವ ಮೂಲಕ ಬೇರ್ಪಟ್ಟಿತು.
ನಂತರ ಬಂದ ಕಾಲಿಸ್ 2, ಮಾರ್ಗನ್ 15 ರನ್ಗಳಿಸಿ ಹೊರ ನಡೆದರು. ಈ ವೇಳೆ ಅರ್ಧ ಶತಕ ಗಳಿಸಿದ್ದ ಗಂಭೀರ್ (50) ಹಾಗೂ ನಂತರ ಬಂದ ಯೂಸುಫ್ ಪಠಾಣ್ 3 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಕೆಕೆಆರ್ 16 ಓವರ್ಗಳಿಗೆ 99 ರನ್ಗಳಿಸಿ 5 ಪ್ರಮುಖ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಜತೆಯಾದ ಡಸ್ಕೆಟ್ (31) ಹಾಗೂ ತಿವಾರಿ (ಅಜೇಯ 15) ತಂಡಕ್ಕೆ 38 ರನ್ಗಳ ಜತೆಯಾಟ ನೀಡಿ ಮೊತ್ತ 150ರ ಗಡಿ ದಾಟಲು ಸಹಕಾರಿಯಾದರು.
ಪುಣೆ ತಂಡದ ಪರ ಭುವನೇಶ್ವರ್ 3 ಹಾಗೂ ಶಾನ್ ಮಾರ್ಷ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಕೆಕೆಆರ್ 152/6(20 ಓವರ್)
ಗಂಭೀರ್ 50 (44)
ಡಸ್ಕೆಟ್ 31 (21)
ಬೌಲಿಂಗ್: ಭುವನೇಶ್ವರ್ 25/3,ಮಾರ್ಷ್ 7/2