ಸಿಂಧು ರ್ಯಾಂಕಿಂಗ್ ಅಬಾಧಿತ
ಮುಂಬೈ: ಭಾರತದ ಕ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಉದಯೋನ್ಮುಖ ತಾರೆ ಪಿ.ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಸೈನಾ 2ನೇ ಸ್ಥಾನದಲ್ಲಿ ಮುಂದುವರೆದರೆ, ಕಳೆದ ವಾರ 2 ಸ್ಥಾನ ಮೇಲಕ್ಕೇರುವ ಮೂಲಕ 13ನೇ ಸ್ಥಾನ ಗಿಟ್ಟಿಸಿದ್ದ ಸಿಂಧು ಯಥಾ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇತ್ತೀಚೆಗಷ್ಟೇ ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ ಗೆದ್ದಿರುವ ಸಿಂಧುಗೆ ರ್ಯಾಂಕಿಂಗ್ನಲ್ಲಿ ಯಾವುದೇ ಬಡ್ತಿ ದೊರಕಿಲ್ಲ.