ಅಡ್ವಾಣಿ, ಮೆಹ್ತಾ ಸ್ಟಾರ್ ಆಕರ್ಷಣೆ
ಮುಂಬೈ: ಎಂಟು ಬಾರಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮತ್ತು ಅದಿತ್ಯ ಮೆಹ್ತಾ ಇಲ್ಲಿ ನಡೆಯಲಿರುವ ಸ್ನೂಕರ್ ಮಾಸ್ಟರ್ಸ್ 2013ರಲ್ಲಿ ಭಾರತ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಪಂದ್ಯಾವಳಿ ಮೇ 12ರಿಂದ 18ರವರೆಗೆ ನಡೆಯಲಿದೆ. ಅಡ್ವಾಣಿ ಮತ್ತು ಮೆಹ್ತಾ ಪಂದ್ಯಾವಳಿಯ ಸ್ಟಾರ್ ಆಕರ್ಷಣೆಯು ಆಗಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಸ್ನೂಕರ್ ಪಂದ್ಯಾವಳಿ ಇದಾಗಿದ್ದು, ವಿಜೇತರು ರು. 5 ಲಕ್ಷ ಬಹುಮಾನ ಪಡೆಯಲಿದ್ದಾರೆ. ವಿಶ್ವದ 21ನೇ ರ್ಯಾಂಕಿಂಗ್ ಆಟಗಾರ ಇಂಗ್ಲೆಂಡ್ನ ಸ್ಟೆಫೆನ್ ಲೀ ಮತ್ತು 31ನೇ ರ್ಯಾಂಕಿಂಗ್ ಆಟಗಾರ ಮಿಚೆಲ್ ಹಾಲ್ಟ್ ಮತ್ತು 46ನೇ ರ್ಯಾಂಕಿಂಗ್ ಆಟಗಾರ ನಿಜೆಲ್ ಬೋಂಡಾ, ಬ್ರಿಟಿಸ್ ಓಪನ್ಗೆದ್ದಿರುವ ಸ್ಟಫೆನ್ ಹೆನ್ರಿ ಸಹ ಪಂದ್ಯಾವಳಿಯ ಸ್ಟಾರ್ ಆಟಗಾರರಾಗಿದ್ದಾರೆ.