ಆರ್‌ಸಿಬಿಗೆ ಅದೃಷ್ಟದ ಗೆಲವು
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 4 ರನ್‌ಗಳ ಅದೃಷ್ಟದ ಜಯ.
ದೆಹಲಿ: ಫಿರೋಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ರನ್‌ಗಳ ಅದೃಷ್ಟದ ಜಯ ಸಂಪಾದಿಸಿತು.
ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿ, 20 ಓವರ್‌ಗಳಲ್ಲಿ 183 ರನ್ ಪೇರಿಸಿದ್ದ ಆರ್‌ಸಿಬಿ ತಂಡಕ್ಕೆ ಉತ್ತರ ನೀಡಲು ಕ್ರೀಸ್‌ಗೆ ಇಳಿದಿದ್ದ ಡೆಲ್ಲಿ, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಆರ್‌ಸಿಬಿ ನೀಡಿದ್ದ ದೊಡ್ಡ ಸವಾಲಿನ ಬೆನ್ನತ್ತಲು ಕ್ರೀಸ್‌ಗೆ ಇಳಿದ ಡೆಲ್ಲಿಗೆ ಜಯವರ್ಧನೆ ಹಾಗೂ ವೀರೇಂದ್ರ ಸೆಹ್ವಾಗ್ ಉತ್ತಮ ಆರಂಭ ನೀಡಿದರು.
ಆರಂಭದ ಮೂರು ಓವರ್‌ಗಳಲ್ಲಿ ಇಬ್ಬರೂ 25 ರನ್ ಪೇರಿಸಿದ್ದರು. 4ನೇ ಓವರ್‌ನಲ್ಲಿ ಜಯವರ್ಧನೆ ವಿಕೆಟ್ ಉರುಳಿದ ಮೇಲೂ ಸೆಹ್ವಾಗ್ ಹಾಗೂ ಉನ್ಮುಕ್ತ್ ಚಾಂದ್ ಜೋಡಿ ಭರ್ಜರಿ ಆಟವನ್ನು ಮುಂದುವರೆಸಿತು.
5 ಓವರ್ ಮುಗಿಯುವ ಹೊತ್ತಿಗೆ ತಂಡದ ಮೊತ್ತವನ್ನು 50 ಗಡಿಗೆ ತಂದು ನಿಲ್ಲಿಸಿದ್ದ ಈ ಜೋಡಿ 6ನೇ ಓವರ್‌ನಲ್ಲಿ ಬೇರ್ಪಟ್ಟಿತು.
ಸೆಹ್ವಾಗ್ ಅವರು ಉನಾದ್ಕತ್ ಬೌಲಿಂಗ್‌ನಲ್ಲಿ ಔಟಾದರು.
ಅವರ ನಂತರ ಬಂದ ಡೇವಿಡ್ ವಾರ್ನರ್ ಹೆಚ್ಚಿಗೆ ಆಡಲಿಲ್ಲ. ಆದರೆ, ಮಧ್ಯಮ ಕ್ರಮಾಂಕದ ರೊಹ್ರರ್ ಹಾಗೂ ಉನಾದ್ಕತ್, 4ನೇ ವಿಕೆಟ್‌ಗೆ 58 ರನ್ ಜೊತೆಯಾಟವಾಯಿತು.
ಆದರೆ, ಈ ಇಬ್ಬರ ವಿಕೆಟ್ ಉರುಳಿದ ಮೇಲೆ ತಂಡದ ಪರವಾಗಿ ಗಟ್ಟಿಯಾಗಿ ನಿಂತು ಆಡಲಿಲ್ಲ.
ಅಂತಿಮ ಹಂತದಲ್ಲಿ ಇರ್ಫಾನ್ ಪಠಾಣ್ ಹಾಗೂ ಮಾರ್ನೆ ಮೊರ್ಕೆಲ್ ಇಬ್ಬರೂ ವೀರೋಚಿತ ಹೋರಾಟ ನಡೆಸಿದರೂ ಪಂದ್ಯವನ್ನು ಗೆಲ್ಲಲಾಗಲಿಲ್ಲ.
ಇದಕ್ಕೂ ಮುನ್ನ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ್ದ ಚೇತೇಶ್ವರ ಪೂಜಾರ (17) ಮತ್ತು ಕ್ರಿಸ್ ಗೇಯ್ಲ್ (4) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾದರು.
ಆರ್‌ಸಿಬಿಯ ಭರವಸೆ ಬ್ಯಾಟ್ಸ್‌ಮನ್ ಗೇಯ್ಲ್ 2ನೇ ಓವರ್‌ನ ಅಂತಿಮ ಎಸೆತದಲ್ಲಿ ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದರೆ, ವಿರಾಟ್ ಕೊಹ್ಲಿಯೊಂದಿಗೆ ಹೊಂದಿಕೊಂಡು ಆಡುತ್ತಿದ್ದ ಪೂಜಾರ್ ಸಹ 5ನೇ ಓವರ್‌ನಲ್ಲಿ ಸಿದ್ದಾರ್ಥ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಪೂಜಾರ ವಿಕೆಟ್ ಒಪ್ಪಿಸಿದ ನಂತರ ಬಂದ ಮೊಯ್ಸಿಸ್ ಹೆನ್ರೀಕೆಸ್ (26), ಡಿವಿಲಿಯರ್ಸ್ (32) ಕೊಹ್ಲಿ ಜತೆ ಸೇರಿ ಜೊತೆಯಾಟ ಪ್ರದರ್ಶಿಸಿದರು.
ಕೊಹ್ಲಿ- ಡಿವಿಲಿಯರ್ಸ್ ಜೋಡಿ, 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 94 ರನ್ ಕಲೆ ಹಾಕಿದರು. ಇದು ತಂಡ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಅಂತಿಮವಾಗಿ, ಆರ್‌ಸಿಬಿ 20 ಓವರ್‌ಗಳಲ್ಲಿ 183 ರನ್ ಪೇರಿಸಿತು.
ಸ್ಕೋರ್ ಬೋರ್ಡ್
ಆರ್‌ಸಿಬಿ 183/4 (20 ಓವರ್)
ಪೂಜಾರ ಬೌಲ್ಡ್ ಕೌಲ್ 17 (17), ಗೇಯ್ಲ್ 4 (7), ಕೊಹ್ಲಿ ರನೌಟ್ ರೋಹ್ರರ್/ಜಾಧವ್ 99 (58), ಹೆನ್ರೀಕೆಸ್ ಸಿ ಮತ್ತು ಬಿ ನದೀಂ 26 (22), ಡಿವಿಲಿಯರ್ಸ್ 32 (17), ಇತರೆ 5.ವಿಕೆಟ್ ಪತನ: 1-6, 2-32, 3-89, 183/4.
ಬೌಲಿಂಗ್: ಮಾರ್ಕೆಲ್ 4-0-35-0, ಪಠಾಣ್ 4-0-24-1, ಕೌಲ್ 4-0-36-1, ಯಾದವ್ 4-0-65-0, ನದೀಂ 4-0-23-1.
ಡೆಲ್ಲಿ ಡೇರ್‌ಡೆವಿಲ್ಸ್: 179/7 (20 ಓವರ್)
ಜಯವರ್ಧನೆ ಬೌಲ್ಡ್ ಬಿ ಉನಾದ್ಕತ್ 19 (13), ಸೆಹ್ವಾಗ್ ಸಿ ಪೂಜಾರ ಬಿ ಉನಾದ್ಕತ್ 18 (10), ಉನ್ಮುಕ್ತ್ ಚಾಂದ್ ಸಿ ವಿನಯ್ ಕುಮಾರ್ ಬಿ ಉನಾದ್ಕತ್ 41 (35), ಡೇವಿಡ್ ವಾರ್ನರ್ ಬಿ ಹೆನ್ರಿಕೇಸ್ 4 (6), ರೊಹ್ರರ್ ಬೌಲ್ಡ್ ಬಿ ವಿನಯ್ ಕುಮಾರ್ 32 (27), ಜಾಧವ್ ಸಿ ವಿನಯ್ ಕುಮಾರ್ ಬಿ ಉನಾದ್ಕತ್ 8 (8), ಇರ್ಫಾನ್ ಪಠಾಣ್ ಅಜೇಯ 23 (11), ಮೊರ್ಕೆಲ್ ಬೌಲ್ಡ್ ಉನಾದ್ಕತ್ 19 (10), ಉಮೇಶ್ ಯಾದವ್ ಅಜೇಯ 4 (1). ಇತರೆ 11.
ವಿಕೆಟ್ ಪತನ: 1-25, 2-49, 3-60, 4-118, 5-129, 6-131, 7-175.
ಬೌಲಿಂಗ್: ರಾಮ್‌ಪಾಲ್ 4-0-35-0, ಹೆನ್ರೀಕೆಸ್ 2-0-21-1, ಉನಾದ್ಕತ್ 4-0-25-5, ವಿನಯ್ ಕುಮಾರ್ 4-0-43-1, ಮುರಳಿ ಕಾರ್ತಿಕ್ 4-0-21-0, ಸಯ್ಯದ್ ಮಹಮ್ಮದ್ 1-0-20-0, ಗೇಯ್ಲ್ 1-0-8-0.