'ಚೆನ್ನೈ ವಿರುದ್ಧದ ಪ್ರದರ್ಶನ ಮರುಕಳಿಸುವುದಿಲ್ಲ'
ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿರುವ ಸನ್ರೈಸರ್ಸ್ ತಂಡ ಮುಂಬರುವ ಪಂದ್ಯಗಳಲ್ಲಿ ಅಂತಹ ತಪ್ಪನ್ನು ಮರುಕಳಿಸುವುದಿಲ್ಲ ಎಂದು ಹೇಳಿಕೊಂಡಿದೆ.
'ನಾವು ಸದಾ ಸಕಾರಾತ್ಮಕವಾಗಿರಬೇಕು. ಚೆನ್ನೈ ವಿರುದ್ಧ ಸೋತಂತೆ ತಂಡವೊಂದು ಸೋತರೆ ಅದು ಇಡೀ ತಂಡಕ್ಕೆ ಅಘಾತ ಉಂಟುಮಾಡುತ್ತದೆ. ಅಲ್ಲದೆ ಹೈದರಾಬಾದ್ನಲ್ಲಿ ಚೆನ್ನೈ ವಿರುದ್ಧ ನಾವು ಸೋತ ರೀತಿ ತುಂಬಾ ಬೇಸರವನ್ನುಂಟು ಮಾಡಿದೆ' ಎಂದು ಸನ್ರೈಸರ್ಸ್ ಹೈದರಾಬಾದ್ ತಂಡದ ತಾಂತ್ರಿಕ ಸಲಹೆಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
'ಪಂದ್ಯಾವಳಿಯಲ್ಲಿ ಮುಂದುವರಿದಂತೆ ನಮ್ಮ ತಪ್ಪುಗಳ ಬಗ್ಗೆ ಕಲಿಯುತ್ತವೆ. ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಅಂತಹ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬಹುದು. ಚೆನ್ನೈ ವಿರುದ್ಧದ ಪಂದ್ಯದ ಸೋಲನ್ನು ನಾವು ಸಕಾರಾತ್ಮಕವಾಗು ತೆಗೆದುಕೊಂಡಿದ್ದೇವೆ' ಎಂದು 38 ವರ್ಷದ ಮಾಜಿ ಬ್ಯಾಟ್ಸ್ಮನ್ ಹೇಳಿದ್ದಾರೆ.
12 ಪಂದ್ಯಗಳಿಂದ 14 ಅಂಕಗಳನ್ನು ಹೊಂದಿರುವ ಸನ್ರೈಸರ್ಸ್ ನಾಕೌಟ್ ಹಂತ ಪ್ರವೇಶಿಸಲು ಸುಗಮ ಹಾದಿಯನ್ನೇ ಹೊಂದಿದೆ. ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಶನಿವಾರ ಗೆದ್ದರೆ ಅದು ಪ್ಲೇ ಆಫ್ ಹಂತಕ್ಕೆ ಸಮೀಪಿಸಬಹುದು.